ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿ ಗೊತ್ತಿಲ್ಲ’: ಸಿದ್ದರಾಮಯ್ಯ ಟ್ವೀಟ್‌

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾಷೆ ಬಳಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರ ಟ್ವೀಟ್‌ ಜಗಳ ಟ್ವೀಟರ್‌ನಲ್ಲಿ ರಂಗೇರಿದೆ.

ಮುರಳೀಧರ ರಾವ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ಟೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿ ಸರ್, ಹಿಂದಿ ಅರ್ಥವಾಗುವುದಿಲ್ಲ’ ಎಂದು ಹೇಳಿ ಕಾಲೆಳೆದಿದ್ದಾರೆ.

ಮುರಳೀಧರರಾವ್‌ ಅವರು ತಮ್ಮ ಟ್ವೀಟ್‌ನಲ್ಲಿ, ‘ಸಿದ್ದರಾಮಯ್ಯನವರೇ ಹೆದರಿಬಿಟ್ಟಿರಾ?, ಬಹಳ ಕಷ್ಟಪಟ್ಟು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದೀರಿ. ಈಗ ಅಲ್ಲಿಯೂ ಸೋಲುವ ಸೂಚನೆಗಳು ಕಂಡಾಗ ಬೇರೆ ಕ್ಷೇತ್ರ ಹುಡುಕುತ್ತಿದ್ದೀರಿ. ನಾನು ನಿಮ್ಮ ಸಂದೇಹವನ್ನು ನಿವಾರಿಸುತ್ತೇನೆ. ನಿಮ್ಮ ಎರಡು ಕ್ಷೇತ್ರಗಳು ಮಾತ್ರವಲ್ಲ,ಇಡೀ ಕರ್ನಾಟಕವೇ ಕಾಂಗ್ರೆಸ್‌ಮುಕ್ತ ಮಾಡಲು ಹೊರಟಿದ್ದೇವೆ’ ಹೇಳಿದ್ದಾರೆ.

ಈ ಟ್ವೀಟ್‌ಗಳಿಗೆ ಪರ–ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಸಿದ್ದರಾಮಯ್ಯ ಅವರ ಕನ್ನಡ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ‘ರಾಹುಲ್‌ ಗಾಂಧಿಗೂ ಕನ್ನಡದಲ್ಲಿ ಟ್ವೀಟ್‌ ಮಾಡುವಂತೆ ಹೇಳಿ’ ಎಂದು ಸಲಹೆ ನೀಡಿದ್ದಾರೆ.

‘ಒಂದು ರಾಜ್ಯದ ಮುಖ್ಯಮಂತ್ರಿಗೆ ಹಿಂದೀ ಬರೋದಿಲ್ಲ ಅಂದರೇ ನಂಬೇಕಾ ನಾವು....ನಿಮ್ಮ ಅಭಿಮಾನಿಗಳು ನೀವೇ ಮುಂದಿನ ಪ್ರಧಾನಮಂತ್ರಿ ಅಂತಾರೆ....’ ಎಂದು ರಜತ್‌ ಕುಮಾರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಂಜುನಾಥ್ ಮಾಚನಹಳ್ಳಿ ಅವರು ‘ಮೋದಿಯವರು ಕನ್ನಡ ಬಾರದಿದ್ದರೂ ಪ್ರಧಾನಿ ಆಗಿಲ್ವಾ..? ಹಿಂದಿಯೂ ಕನ್ನಡದಂತೆ ಒಂದು ಪ್ರಾದೇಶಿಕ ಭಾಷೆ. ಹಾಗೆ ಪ್ರಧಾನಿಯಾಗಲು ಹಿಂದಿ ಬರಲೇಬೇಕು ಎಂದು ಯಾವುದೇ ಕಾನೂನು ಇಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT