ಯಡಿಯೂರಪ್ಪ ಬೆಂಬಲಿಗರಿಗೇ ಟಿಕೆಟ್‌, ಗೊಂದಲದಲ್ಲಿ ಜಿಲ್ಲಾ ಬಿಜೆಪಿ

ಕೆಜೆಪಿ ಮೇಲುಗೈ, ಬಿಜೆಪಿಯಲ್ಲಿ ಅಸಮಾಧಾನ!

ಅಂತೂ ಇಂತು ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕೆಜೆಪಿ ಬಣ ಮೇಲುಗೈ ಸಾಧಿಸಿದೆ.

ದಾವಣಗೆರೆ: ಅಂತೂ ಇಂತು ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕೆಜೆಪಿ ಬಣ ಮೇಲುಗೈ ಸಾಧಿಸಿದೆ.

ಹಿರಿಯ ಮುಖಂಡ, ಜಿಲ್ಲೆಯಲ್ಲಿ ರಾಯಣ್ಣ ಬ್ರಿಗೇಡ್‌ಗೆ ಬೆಂಬಲವಾಗಿ ನಿಂತಿದ್ದ ಎಸ್‌.ಎ. ರವೀಂದ್ರನಾಥ್‌, ಬಿಜೆಪಿಯಲ್ಲೇ ಉಳಿದಿದ್ದ ಮಾಜಿ ಸಚಿವ ಕರುಣಾಕರ ರೆಡ್ಡಿ ಇವರಿಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಯಡಿಯೂರಪ್ಪ ಜತೆ ಕೆಜೆಪಿಗೆ ಹೋಗಿ ಬಂದವರು.

ಪಟ್ಟಿ ಬಿಡುಗಡೆಯಲ್ಲೇ ತಂತ್ರಗಾರಿಕೆ: ಟಿಕೆಟ್‌ ಹಂಚಿಕೆ ಪಟ್ಟಿಯನ್ನು ಜಿಲ್ಲೆಯ ಮಟ್ಟಿಗೆ ಬಹಳ ತಂತ್ರಗಾರಿಕೆಯಿಂದಲೇ ಬಿಜೆಪಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲೇ ರವೀಂದ್ರನಾಥ್‌ ಅವರ ಹೆಸರಿರುವಂತೆ ನೋಡಿಕೊಳ್ಳಲಾಯಿತು. ಈ ಮೂಲಕ ರಾಯಣ್ಣ ಬ್ರಿಗೇಡ್‌ ಮುಖಂಡರಲ್ಲಿ ಭರವಸೆ ಹುಟ್ಟಿಸುವ ಕೈಚಳಕ ತೋರಿಸಲಾಯಿತು. ಎರಡನೇ ಪಟ್ಟಿಯಲ್ಲಿ ಹೊನ್ನಾಳಿಯಿಂದ ಎಂ.‍ಪಿ. ರೇಣುಕಾಚಾರ್ಯ, ಚನ್ನಗಿರಿಯಿಂದ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ನೀಡಲಾಯಿತು. ಇವರಿಬ್ಬರೂ ಯಡಿಯೂರಪ್ಪ ಆಪ್ತರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

ಮಾಯಕೊಂಡ: ಎಲ್ಲಿ ಹೋಯಿತು ಆಣೆ, ಪ್ರಮಾಣ?

ಮಾಯಕೊಂಡದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಮಾಜಿ ಶಾಸಕ ಎಂ. ಬಸವರಾಜ್‌ ನಾಯ್ಕ, ಎಚ್‌. ಆನಂದಪ್ಪ, ಪ್ರೊ. ಲಿಂಗಣ್ಣ, ಎಚ್‌.ಕೆ. ಬಸವರಾಜ್, ಎನ್‌. ಹನುಮಂತ ನಾಯ್ಕ ಹಾಗೂ ಬಿ.ವೆಂಕಟಪ್ಪ ಇವರಲ್ಲಿ ಪೈಪೋಟಿ ತೀವ್ರವಾಗಿತ್ತು. ಬಸವರಾಜ್‌ ನಾಯ್ಕ ಹೊರತುಪಡಿಸಿ ಉಳಿದ ನಾಲ್ವರು ಯಾರಿಗೇ ಟಿಕೆಟ್‌ ಸಿಕ್ಕರೂ ಒಟ್ಟಾಗಿ, ಅವರ ಪರವಾಗಿ ಕೆಲಸ ಮಾಡಲು ಆಣೆ, ಪ್ರಮಾಣ ಮಾಡಿಕೊಂಡಿದ್ದರು.

ಈಗ ಪ್ರೊ. ಲಿಂಗಣ್ಣಗೆ ಟಿಕೆಟ್‌ ಘೋಷಣೆಯಾಗಿದೆ. ಆದರೆ, ಆಕಾಂಕ್ಷಿಯಾಗಿದ್ದ ಎಚ್‌. ಆನಂದಪ್ಪ ಈಗ ಸ್ವತಂತ್ರವಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಉಳಿದವರೂ ಒಟ್ಟಾಗಿ ಲಿಂಗಣ್ಣ ಪರವಾಗಿ ಕೆಲಸ ಮಾಡುತ್ತಾರಾ ಎಂಬುದು ಕುತೂಹಲಕರವಾಗಿದೆ. ಮಾಜಿ ಶಾಸಕ ಎಂ. ಬಸವರಾಜ್‌ ನಾಯ್ಕ ನಡೆ ಇನ್ನೂ ನಿಗೂಢ.

‘ಸರ್ವೆ ನಡೆದಿಲ್ಲ’

ಸರ್ವೆ ನಡೆಸಿಯೇ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಬೇಕೆಂಬ ನಿಯಮ ಇದ್ದಿದ್ದು ನಿಜ. ಆದರೆ, ಈಗಾಗಲೇ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಸರ್ವೆ ನಡೆದೇ ಇಲ್ಲೆ ಎಂಬ ಬಗ್ಗೆ ಬಿಜೆಪಿಯ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

**

ಗೊಂದಲ, ಅಸಮಾಧಾನಗಳು ಈ ಸಂದರ್ಭದಲ್ಲಿ ಸಾಮಾನ್ಯ. ಪಕ್ಷಕ್ಕಿಂತ ಯಾರೂ ಹೆಚ್ಚಲ್ಲ. ಪಕ್ಷ ಬಿ ಫಾರಂ ನೀಡಿದ ವ್ಯಕ್ತಿಯೇ ಅಭ್ಯರ್ಥಿ. – ಯಶವಂತರಾವ್‌ ಜಾಧವ್,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

 

Comments
ಈ ವಿಭಾಗದಿಂದ ಇನ್ನಷ್ಟು
ಶ್ರೀಗಳಿಗಿಂತ ಕುಮಾರಸ್ವಾಮಿ ದೊಡ್ಡವರಲ್ಲ

ಹರಿಹರ
ಶ್ರೀಗಳಿಗಿಂತ ಕುಮಾರಸ್ವಾಮಿ ದೊಡ್ಡವರಲ್ಲ

26 May, 2018

ದಾವಣಗೆರೆ
ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರ ಒದಗಿಸಿ

ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಪೂರೈಸಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ...

26 May, 2018
ಕುಮಾರಸ್ವಾಮಿ ವಿರುದ್ಧ ಭಕ್ತ ಮಂಡಳಿ ಆಕ್ರೋಶ

ದಾವಣಗೆರೆ
ಕುಮಾರಸ್ವಾಮಿ ವಿರುದ್ಧ ಭಕ್ತ ಮಂಡಳಿ ಆಕ್ರೋಶ

25 May, 2018

ದಾವಣಗೆರೆ
ಮತ್ತೆ ತಪ್ಪು ಮಾಡಲ್ಲ, ಈಗ ಕೈಹಿಡಿಯಿರಿ

‘ಮಧ್ಯದಲ್ಲೇ ನಿಮ್ಮನ್ನೆಲ್ಲ ಬಿಟ್ಟು ವಿಧಾನಸಭೆಗೆ ಹೋದೆ; ಈಗ ತಪ್ಪಿನ ಅರಿವು ಆಗಿದೆ. ಎರಡು ವರ್ಷ ನಾನು ಪಟ್ಟ ಯಾತನೆ ಯಾರಿಗೂ ಗೊತ್ತಿಲ್ಲ. ನಾನು ಎಂದಿಗೂ...

25 May, 2018
ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

ಉಚ್ಚಂಗಿದುರ್ಗ
ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

25 May, 2018