ವೀರಶೈವ–ಲಿಂಗಾಯತ ಸಮಾವೇಶ; ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಪ್ರತಿಪಾದನೆ

ಕಾಂಗ್ರೆಸ್‌ ಮುಖಂಡರು ಪುಟ್ಟರಾಜು ಬೆಂಬಲಕ್ಕಿದ್ದಾರೆ

‘ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರೇ ಈ ಚುನಾವಣೆ ಎದುರಿಸಿದ್ದರೆ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಗೆಲುವು ಮತ್ತಷ್ಟು ಸುಲಭವಾಗುತ್ತಿತ್ತು’ ಎಂದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅಭಿಪ್ರಾಯಪಟ್ಟರು.

ಪಾಂಡವಪುರ: ‘ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರೇ ಈ ಚುನಾವಣೆ ಎದುರಿಸಿದ್ದರೆ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಗೆಲುವು ಮತ್ತಷ್ಟು ಸುಲಭವಾಗುತ್ತಿತ್ತು’ ಎಂದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಶನಿವಾರ ನಡೆದ ‘ವೀರಶೈವ ಲಿಂಗಾಯತ ಬೆಂಬಲಿತ ಜಾತ್ಯಾತೀ ಜೆಡಿಎಸ್‌ ಸಮಾವೇಶ’ವನ್ನು ಉದ್ಫಾಟಿಸಿ ಅವರು ಮಾತನಾಡಿದರು.

‘ಸಿ.ಎಸ್.ಪುಟ್ಟರಾಜು ಏನು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಆದರೆ, ಇಡೀ ಕಾಂಗ್ರೆಸ್ ಮುಖಂಡರು ಪುಟ್ಟರಾಜು ಬೆಂಬಲಕ್ಕೆ ನಿಂತಿರುವುದು ನಿಜ’ ಎಂದು ಹೇಳಿದರು.

‘ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪುಟ್ಟರಾಜು ಈ ಬಾರಿ ಗೆಲ್ಲಲೇಬೇಕು. ಇದು ಕ್ಷೇತ್ರದ ಮತದಾರರ ಸತ್ವಪರೀಕ್ಷೆ ಕಾಲ. ಪುಟ್ಟರಾಜು ಗೆದ್ದರೆ ಸಚಿವರಾಗುತ್ತಾರೆ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿ ಕೆಲಸಗಳು ನಡೆಯಲಿವೆ’ ಎಂದು ಹೇಳಿದರು.

ಸಮುದಾಯದ ಭವನ ನಿರ್ಮಾಣ: ಜೆಡಿಎಸ್ ಅಭ್ಯರ್ಥಿ ಸಂಸದ ಸಿ.ಎಸ್.ಪುಟ್ಟರಾಜು ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಅದಕ್ಕೆ ಈ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಮೇಲುಕೋಟೆ ಕ್ಷೇತ್ರದಲ್ಲಿ ಅನುಕಂಪದ ಯಾವುದೇ ಅಲೆ ಇಲ್ಲ. ಏ.23ರಂದು ನಡೆಯುವ ಜೆಡಿಎಸ್‌ ಸಮಾವೇಶದಲ್ಲಿ ನನ್ನ ಗೆಲುವು ತೀರ್ಮಾನವಾಗಲಿದೆ ಎಂದರು. ವೀರಶೈವ ಲಿಂಗಾಯುತ ಸಮುದಾಯ ಭವನ ನಿರ್ಮಿಸುವ ಭರವಸೆಯನ್ನು ನೀಡಿದರು.

ವೀರಶೈವ ಮುಖಂಡ ನಿರಂಜನಬಾಬು ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯಲ್ಲಿ  ವೀರಶೈವ, ಲಿಂಗಾಯುತ ಸಮುದಾಯವನ್ನು ಒಡೆದಿದ್ದಾರೆ. ಅವರು ಇದರ ಪರಿಣಾಮವನ್ನೂ ಅನುಭವಿಸಲಿದ್ದಾರೆ’ ಎಂದರು.

ಜೆಡಿಎಸ್ ಮುಖಂಡರಾದ ಸಿ.ಅಣ್ಣೇಗೌಡ, ಹಿರೇಮರಳಿ ಧರ್ಮರಾಜು, ಬೆಳ್ಳಾಳೆ ಮಲ್ಲೇಶ್, ಮಾದಪ್ಪ, ನಾಸರ್, ಶಿವಣ್ಣ, ಕೆ.ವೈರಮುಡಿಗೌಡ, ಮಂಡಿಬೆಟ್ಟಹಳ್ಳಿ ದ್ಯಾವಪ್ಪ, ಎಂ.ಬಿ.ಶ್ರೀನಿವಾಸ್‌, ನಾಸರ್, ಅಮೀರ್‌ ಪಾಷಾ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
27ರಂದು ‘ಜ್ಞಾನಾಮೃತ ಭವನ’ ಲೋಕಾರ್ಪಣೆ

ನಾಗಮಂಗಲ
27ರಂದು ‘ಜ್ಞಾನಾಮೃತ ಭವನ’ ಲೋಕಾರ್ಪಣೆ

26 May, 2018

ಪಾಂಡವಪುರ
ಡೇರಿ ಕಟ್ಟಡ ನಿರ್ಮಾಣಕ್ಕೆ ₹4 ಲಕ್ಷ ಚೆಕ್‌ ವಿತರಣೆ

ಪಟ್ಟಣದ ಮನ್‌ಮುಲ್‌ ಉಪ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಟ್ಟನಹಳ್ಳಿಯ ಡೇರಿ ಕಟ್ಟಡಕ್ಕೆ ₹3 ಲಕ್ಷ ಹಾಗೂ ಜಿ.ಸಿಂಗಾಪುರದ ಡೇರಿ ಕಟ್ಟಡಕ್ಕೆ ₹1 ಲಕ್ಷ ಅನುದಾನದ...

26 May, 2018

ಮಂಡ್ಯ
ಹಸ್ತಪ್ರತಿ ಸಂರಕ್ಷಿಸುವವರ ಸಂಖ್ಯೆ ಕ್ಷೀಣ

‘ರಾಮಾಯಣ, ಮಹಾ ಭಾರತ, ಪ್ರಾಕೃತ ಗ್ರಂಥಗಳನ್ನು, ಜೈನ ಹಾಗೂ ಬೌದ್ಧ ಸಂಸ್ಕೃತಿಯನ್ನು, ವಚನ ಸಾಹಿತ್ಯವನ್ನು, ದಾಸರ ಕೃತಿಗಳನ್ನು ನಮಗೆ ಉಳಿಸಿಕೊಟ್ಟಂತಹ ಹಸ್ತಪ್ರತಿಗಳು ದೇಶದ ಅಮೂಲ್ಯ...

26 May, 2018
60 ತಳಿಗಳ ಮಾವು!

ಮಂಡ್ಯ
60 ತಳಿಗಳ ಮಾವು!

26 May, 2018
ಬೆಳ್ಳೂರು ಸಂತೆ: ಸೌಕರ್ಯದ್ದೇ ಚಿಂತೆ

ನಾಗಮಂಗಲ
ಬೆಳ್ಳೂರು ಸಂತೆ: ಸೌಕರ್ಯದ್ದೇ ಚಿಂತೆ

25 May, 2018