ಗುರುವಾರ, 25–4–1968

ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

ಅಗತ್ಯ ಬಿದ್ದರೆ ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧ: ಎಸ್ಸೆನ್ 
ನವದೆಹಲಿ, ಏ. 24– ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

ಪ್ರೆಸ್‌ಕ್ಲಬ್ಬಿನ ಭೋಜನಕೂಟದಲ್ಲಿ ಮಾತನಾಡುತ್ತಿದ್ದ ಎಸ್ಸೆನ್ ಅವರು ಕೇಂದ್ರದಲ್ಲೂ ಅಂತಹ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.

ಅನ್ನಪೂರ್ಣೆ ಈ ವಸುಂಧರೆ 
ನವದೆಹಲಿ, ಏ. 24– ಮಾನವ ಕುಲಕ್ಕೆಲ್ಲ ಅನ್ನ ನೀಡುವ ಶಕ್ತಿ ಈ  ಭೂಮಿಗೆ ಇದೆ ಎಂಬುದು ರಷ್ಯದ ವಿಜ್ಞಾನಿಗಳ ನಂಬಿಕೆ. ಜಗತ್ತಿನಾದ್ಯಂತ ಕ್ರೂರ ಕ್ಷಾಮ ತಲೆದೋರುವುದೆಂಬ ಕೆಲ ಅಮೆರಿಕನ್ ವಿಜ್ಞಾನಿಗಳ ಮಾತಿನಲ್ಲಿ ಅವರಿಗೆ ನಂಬಿಕೆ ಇಲ್ಲ.

ಜೀವನದ ಸಂಪನ್ಮೂಲಗಳನ್ನು ಹೆಚ್ಚಿಸಲು ವಿಜ್ಞಾನಕ್ಕೆ ಅಪಾರ ಅವಕಾಶವಿದೆ ಎಂಬುದು ಈ ಆಶಾವಾದಿ ವಿಜ್ಞಾನಿಗಳ ಭಾವನೆ. ಒಟ್ಟು ಭೂ ಪ್ರದೇಶದ ಶೇಕಡ 1 ರಷ್ಟು ಭಾಗದಲ್ಲಿ ಮಾತ್ರ ಈಗ ಸಾಗುವಳಿ ಮಾಡಲಾಗುತ್ತಿದೆ.

ಕೃಷ್ಣಾ ವಿವಾದ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ
ಹೈದರಾಬಾದ್, ಏ. 24– ಕೃಷ್ಣಾ ನೀರು ವಿವಾದದ ಬಗ್ಗೆ ಆಂಧ್ರ, ಮೈಸೂರು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸುವರು, ವಿವಾದವನ್ನು ಮಾತುಕತೆ ಮೂಲಕ ಮುಕ್ತಾಯಗೊಳಿಸುವ ಯತ್ನವಿದು.

Comments
ಈ ವಿಭಾಗದಿಂದ ಇನ್ನಷ್ಟು

50 ವರ್ಷಗಳ ಹಿಂದೆ
ಭಾನುವಾರ, 26–5–1968

ಬೆಂಗಳೂರು, ಮೇ 25– ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು–ಕೇರಳ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪೂರ್ಣವಾಗಿ ಅಂಗೀಕರಿಸಬೇಕೆಂಬ ಮೈಸೂರು...

26 May, 2018

ದಿನದ ನೆನಪು
ಶನಿವಾರ, 25–5–1968

ಬಾಂಬ್ ದಾಳಿಯ ಪೂರ್ಣ ನಿಲುಗಡೆ ವಿಯಟ್ನಾಂ ಶಾಂತಿ ಸಾಧನೆಗೆ ಅತ್ಯಂತ ಅಗತ್ಯ ಎಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಹೇಳಿದರು. ...

25 May, 2018

ದಿನದ ನೆನಪು
ಶುಕ್ರವಾರ, 24–5–1968

ನಲವತ್ತೈದು ವರ್ಷ ವಯಸ್ಸಿನ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಮೈಸೂರು ರಾಜ್ಯದ ನೂತನ ಮುಖ್ಯಮಂತ್ರಿ.

24 May, 2018

ದಿನದ ನೆನಪು
ಗುರುವಾರ, 23–5–1968

ಗುರುವಾರ ನಡೆಯುವ ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರ ಚುನಾವಣೆಗೆ ಉಮೇದುವಾರರಾಗಲು ಲೋಕೋಪಯೋಗಿ ಇಲಾಖೆ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಜೆ...

23 May, 2018

ದಿನದ ನೆನಪು
ಬುಧವಾರ, 22–5–1968

ಭಾರತದ ಪ್ರಜಾಪ್ರಭುತ್ವ ಇಂದು ‘ಶುದ್ಧ ಕತ್ತೆ’ ಆಗಿದೆ! ಇದು ಶ್ರೀ ಕೆಂಗಲ್ ಹನುಮಂತಯ್ಯನವರ ಅಭಿಪ್ರಾಯ.

22 May, 2018