ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ನಾಮಪತ್ರಗಳು ಊರ್ಜಿತ

ಮಾಲೂರು ವಿಧಾನಸಭಾ ಕ್ಷೇತ್ರ
Last Updated 26 ಏಪ್ರಿಲ್ 2018, 7:32 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ಪ್ರಜಾ ಪರಿವರ್ತನ ಪಕ್ಷದ ಟಿ.ರಾಜಶೇಖರ್ ನಾಮಪತ್ರ ಅಸಿಂಧುಗೊಂಡಿದ್ದು, 16 ಮಂದಿ ಉಮೇದುವಾರಿಕೆಯಿಂದ 24 ನಾಮಪತ್ರಗಳು ಊರ್ಜಿತಗೊಂಡಿವೆ.

ಮೇ 12ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಕಾರಣ ಬುಧವಾರ ನಾಮಪತ್ರಗಳ ಪರಿಶೀಲನಾ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ನಡೆಯಿತು.

17 ಮಂದಿ ಉಮೇದುವಾರಿಕೆಯಲ್ಲಿ 28 ನಾಮಪತ್ರ ಸಲ್ಲಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷದಿಂದ ಕೆ.ವೈ.ನಂಜೇಗೌಡ, ಬಿಜೆಪಿಯಿಂದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಜೆಡಿಎಸ್ ವತಿಯಿಂದ ಶಾಸಕ ಕೆ.ಎಸ್.ಮಂಜುನಾಥ್ ಗೌಡ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯಿಂದ ಕೆ.ಗೋಪಾಲಪ್ಪ, ಅಂಬೇಡ್ಕ(ರೈ) ಪಾರ್ಟಿ ಆಫ್ ಇಂಡಿಯಾ (ಎಪಿಐ) ಪಕ್ಷದಿಂದ ರವಿಕುಮಾರ್, ಸಮಾಜವಾದಿ ಪಕ್ಷದಿಂದ ತಮ್ಮಪ್ಪ, ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಅಮರ್ ನಾಥ್ ಹಾಗೂ ಉಳಿದ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಮಾಜಿ ಶಾಸಕ ಎ.ನಾಗರಾಜು ನಾಮಪತ್ರ ಸೇರಿದಂತೆ 16 ಮಂದಿ ಉಮೇದುವಾರಿಕೆ ಊರ್ಜಿತವಾಗಿದೆ.

28 ನಾಮಪತ್ರಗಳ ಪೈಕಿ ಸುನೀತಾ ಕೆ.ಶೆಟ್ಟಿ ಸಲ್ಲಿಸಿದ್ದ 2 ನಾಮ ಪತ್ರಗಳ ಪೈಕಿ 1 ನಾಮ ಪತ್ರ ಹಾಗೂ ಆರ್.ಎಸ್.ಜೈ ಪುನೀತ್ ಸಲ್ಲಿಸಿದ್ದ ನಾಮಪತ್ರ ಸಮರ್ಪಕ ದಾಖಲೆಗಳಿಲ್ಲದೆ ಅಸಿಂಧುಗೊಂಡಿದೆ. ಪ್ರಜಾ ಪರಿವರ್ತನಾ ಪಕ್ಷದ ಟಿ.ರಾಜಶೇಖರ್ ನಾಮಪತ್ರ ಅಸಿಂಧುಗೊಂಡಿದ್ದರಿಂದ 28 ನಾಮಪತ್ರಗಳ ಪೈಕಿ 4 ನಾಮಪತ್ರಗಳು ಅಸಿಂಧುಗೊಂಡಿದೆ. ಇದರಿಂದ 16 ಮಂದಿ ಉಮೇದುವಾರಿಕೆಯಿಂದ 24 ನಾಮಪತ್ರಗಳು ಊರ್ಜಿತವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT