ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ನೀರು ಸರಬರಾಜು ಇಂದು

Last Updated 26 ಏಪ್ರಿಲ್ 2018, 11:27 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ವಿವಿಧ ಬಡಾವಣೆಗಳಿಗೆ ಏ. 26ರಂದು ನೀರು ಸರಬರಾಜು ಮಾಡಲಾಗುತ್ತದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ವೀರೇಂದ್ರ ಪಾಟೀಲ ಜಿ.ಡಿ.ಎ ಜಲಸಂಗ್ರಹಗಾರದಿಂದ ಜಿ.ಡಿ.ಎ 1,2,3ನೇ ಬ್ಲಾಕ್, 1ನೇ ಬ್ಲಾಕ್ ಓಂ ನಗರ. ಜಾಗೃತಿ ಜಲ ಸಂಗ್ರಹಗಾರದಿಂದ ಗಣೇಶ ನಗರ, ಮಹಾವೀರ ನಗರ ಜಲ ಸಂಗ್ರಹಗಾರದಿಂದ ಪಂಚಶೀಲ ನಗರ, ಎಸ್.ಬಿ.ಜಿ.ಎಲ್.ಎಸ್.ಆರ್ ಜಲಸಂಗ್ರಹಗಾರದಿಂದ ರಾಮ ನಗರ, ಸಿ.ಐ.ಬಿ ಕಾಲೊನಿ, ಡೈರೆಕ್ಟ್‌ ಲೈನ್ ಜಲಸಂಗ್ರಹಗಾರದಿಂದ ಪ್ರಗತಿ ಕಾಲೊನಿ, ಗುಬ್ಬಿ ಕಾಲೊನಿಗೆ ನೀರು ಬಿಡಲಾಗುವುದುದು.

ಇಸ್ಲಾಮಾಬಾದ ಕಾಲೊನಿ ಜಲಸಂಗ್ರಹಗಾರದಿಂದ ಬುಲಂದ ಪರವೇಜ್ ಕಾಲೊನಿ ಫೇಸ್ 1,2,3. ಬಿಲಾಲಾಬಾದ್ ಕಾಲೊನಿ ಜಲಸಂಗ್ರಹಗಾರದಿಂದ ನಯಾ ಮೋಹಲ್ಲಾ, ಮಿಜಗುರಿ(ಭಾ), ಹಜ್ ಕಮೀಟಿ ಹಾಲ್, ತಸ್ಸಿ ಗಲಗಲಿ, ಟಾಂಗಾ ಗಲ್ಲಿ, ಸಿದ್ಧಿ ಅಂಬರ್‌ ಕಟ್ಟಾ. ಮಕ್ಕಾ ಕಾಲೊನಿ ಜಲ ಸಂಗ್ರಹಗಾರದಿಂದ ಆಜಾದಪೂರ ಫೇಸ್ 1,2,3,4,5,6,7, ಗರಿಬ ನವಾಜ ಕಾಲೊನಿ, ಅಹ್ಮದ್ ನಗರ, ಉಮರ್ ಕಾಲೊನಿ, ಸೋನಿಯಾ ಗಾಂಧಿ ಕಾಲೊನಿ, ಅಮನ್ ನಗರ. ಹುಸ್ಸೇನಿ ಅಲಮ್,ಕಾಲಿ ಗುಂಬಜ್, ಪಾಶಾಪೂರಾ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. ರೋಜಾ ಜಲಸಂಗ್ರಹಗಾರದಿಂದ ಜಿ.ಡಿ.ಎ ಸಂತ್ರಸವಾಡಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಬಸವೇಶ್ವರ ಕಾಲೊನಿ(ಭಾ), ಬಂದೆ ನವಾಜ್ ಕಾಲೊನಿ, ಸಂತ್ರಸವಾಡಿ (ಭಾ). ಕೊರಂಟಿ ಹನುಮಾನ ಜಲ ಸಂಗ್ರಹಗಾರದಿಂದ ಟಾರಫೈಲ್ 14ನೇ ಮತ್ತು 8ನೇ ಕ್ರಾಸ್,ಕೃಷ್ಣಾ ನಗರ. ದರಿಯಾಪೂರ ಜಿ.ಡಿ.ಎ ಜಲಸಂಗ್ರಹಗಾರದಿಂದ ಟಾರಫೈಲ್(ಭಾ) 1ನೇ ಫೇಸ್, ವಿಶಾಲ ನಗರ, ಅಂಬಿಕಾ ನಗರ. ಕರುಣೇಶ್ವರರ ನಗರ ಜಲಸಂಗ್ರಹಗಾರದಿಂದ ಕರುಣೇಶ್ವರ ನಗರ, ಭಾಗ್ಯವಂತಿ ನಗರ, ಯಶವಂತ ನಗರ, ವರದಾ ನಗರ, ಬ್ಯಾಂಕ್ ಕಾಲೊನಿ, ಮಹಾರಾಜಾ ಲೇಔಟ್,ದೇವಾ ನಗರ ಶ್ರೀಹರಿ ನಗರ. ಕೆ.ಎಚ್.ಬಿ. ಹೈಕೋರ್ಟ್‌ ಜಲಸಂಗ್ರಹಗಾರದಿಂದ ಎಲ್.ಐ.ಜಿ ಮತ್ತು ಎಂ.ಐ.ಜಿ. ಕಾಲೊನಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಮೋಮಿನಪೂರಾ ಜಲಸಂಗ್ರಹಗಾರದಿಂದ ಮೋಮಿನಾಪೂರಾ ಅಲ್ಹಾಬಾದ್‌. ಹಳೇ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಯ ಜಲಸಂಗ್ರಹಗಾರದಿಂದ ಜಗತ್ ಮೇಲ್ಭಾಗ,ಗೊಲ್ಲರ ಗಲ್ಲಿ,ಸುಂದರ್ ನಗರ(ಭಾ),ಲುಕಮನ್ ಕಾಲೇಜ ಥಾಂಡಾ. ಪೊಲೀಸ್ ಕಾಲೊನಿ ಜಲಸಂಗ್ರಹಗಾರದಿಂದ ಪೊಲೀಸ್ ಕಾಲೊನಿ,ಕುವೆಂಪು ನಗರ,ವೀರೇಶ ನಗರ, ಎಂ.ಆರ್.ಎಂ.ಸಿ ಕಾಲೇಜು ಸುತ್ತಮುತ್ತ ನೀರು ಹರಿಸಲಾಗುತ್ತದೆ.

ಹಳೇ ಜಲಶುದ್ಧೀಕರಣ ಶಹಾಬಜಾರ ಜಲಸಂಗ್ರಹಗಾರದಿಂದ ಶಹಾಬಜಾರ,ಸ್ವಾದಿ ಗಲಗಲಿ, ಚನ್ನಮಲ್ಲೇಶ್ವರ ನಗರ, ಕಬಾಡ್ ಗಲಗಲಿ,ಅಂಬಾಭವಾನಿ ಟೆಂಪಲ್ ರೋಡ್. ರಾಮ ನಗರ, ಟಿ.ವಿ ಸ್ಟೇಷನ್ ಜಲಸಂಗ್ರಹಗಾರದಿಂದ ರೇವಣಸಿದ್ದೇಶ್ವರ ಕಾಲೊನಿ, ಕಪನೂರ್. ಎಚ್‌.ಎಸ್.ಆರ್ ಶಿವಾಜಿನಗರ ಜಲಸಂಗ್ರಹಗಾರದಿಂದ ರಾಜೀವ ಗಾಂಧಿ ನಗರ (ಭಾಗಶಃ), ಕನಕ ನಗರ, ಕಾಕಡೆ ಚೌಕ,ಚಪ್ಪರ ಬಂದಿ ಲೇಔಟ್,ಮುಸ್ಲಿಂ ಸಂಘ, ತಾಜ ನಗರ(ಭಾಗಶಃ). ಮದರ ಟ್ಯಾಂಕ್ ಜಲಶುದ್ಧೀಕರಣ ಘಟಕದಿಂದ ರಾಮತೀರ್ಥ, ಶಿವಲಿಂಗೇಶ್ವರ ಕಾಲೊನಿ, ಸಿದ್ರಾಮೇಶ್ವರ ನಗರ, ಕೃಷಿ ವಿಶ್ವವಿದ್ಯಾಲಯ, ಅಹ್ಮದ್ ನಗರ. ಬಸವ ನಗರ ಜಲಸಂಗ್ರಹಗಾರದಿಂದ ಬಸವ ನಗರ, ವಡ್ಡರ್‌ಗಲ್ಲಿ (ಭಾ),ಬೋರಾಬಾಯಿ ನಗರ. ಹೀರಾಪೂರ ಜಲಸಂಗ್ರಹಗಾರದಿಂದ ಹೀರಾನಗರ, ಹೀರಾ ನಗರ. ಮದೀನಾ ಕಾಲೊನಿ, ಮಿಸ್ಬಾ ನಗರ, ಗಲೀಬ ಕಾಲೊನಿ, ಮುರ್ಗಿ ಗಲಗಲಿ, ಪಟೇಲ್‌ ಕಾಲೊನಿಗೆ ನೀರು ಬಿಡಲಾಗುತ್ತದೆ.

ಭೀಮಾ ನದಿಯ ಮೂಲಸ್ಥಾವರ ಅಥವಾ ಕೋಟನೂರ ಮತ್ತು ಬೆಣ್ಣೆತೋರಾ ಮೂಲಸ್ಥಾವರದಲ್ಲಿ  ತಾಂತ್ರಿಕ ದೋಷವಾದರೆ ನೀರು ಸರಬರಾಜು ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತದೆ ಎಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ ಉಮೇಶ ಎಂ.ಪಂಚಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT