ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಣೆಯ ದೋಷ...

‘ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗಲ್ಲ’
Last Updated 27 ಮೇ 2018, 19:30 IST
ಅಕ್ಷರ ಗಾತ್ರ

‘ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗಲ್ಲ’ ಎಂದು ಸಿದ್ದರಾಮಯ್ಯ ಅವರು ಮಾಡಿದ್ದ ಆಣೆ– ಪ್ರಮಾಣದ ದೋಷ ಯಾರಿಗೆ ಎಂದು ನಾಗರಾಜ ಶೆಣೈ ಪ್ರಶ್ನಿಸಿದ್ದಾರೆ (ವಾ.ವಾ., ಮೇ 25).

ಪ್ರಾಮಾಣಿಕ ರಾಜಕಾರಣ ಮಾಡುವ ದಿನಗಳಲ್ಲಿ ಆಣೆ– ಪ್ರಮಾಣಗಳಿಗೆ ಬೆಲೆ ಇತ್ತು. ಈಗ ಏನಿದ್ದರೂ ‘ಆಣೆ ಹೋಯ್ತು ನಯಾಪೈಸೆ ಬಂತು ಡುಂ ಡುಮಕ್... ನಯಾಪೈಸೆ ಹೋಯ್ತು ರೂಪಾಯಿ ಬಂತು ಡುಂ ಡುಮಕ್’ಎನ್ನುವ ಕಾಲ.

ಈಗ ರೂಪಾಯಿ ಇದ್ರೂ ಬೆಲೆ ಇಲ್ಲ. ಎಲ್ಲಾ ಕೋಟಿ ಕೋಟಿಯ ಲೆಕ್ಕಕ್ಕೆ ಡುಂ ಡುಮಕ್... ಎನ್ನುವಂತಾಗಿದೆ.

‘ಆಣೆ’ಯ ಕಾಲಹೋದ ಬಳಿಕ ಆಣೆ–ಪ್ರಮಾಣಗಳಲ್ಲಿ ಶಕ್ತಿಯೇ ಇಲ್ಲವಾಗಿದೆ. ಜನರು ನ್ಯಾಯದ ಪಥದಲ್ಲಿ ಸಾಗುತ್ತಿದ್ದ ಕಾಲದಲ್ಲಿ ಆಣೆ– ಪ್ರಮಾಣ
ಗಳಿಗೆ ಹೆದರುತ್ತಿದ್ದರು. ಈಗ ತಮ್ಮ ವಿರೋಧಿಯ ಅಪ್ಪನ ಮೇಲೆ ಆಣೆ– ಪ್ರಮಾಣ ಮಾಡುತ್ತಾರೆಂದರೆ ಅವರೆಷ್ಟು (ಅ)ನ್ಯಾಯದ ಪಥದಲ್ಲಿ ಇದ್ದಾರೆ ಎಂಬುದು ತಿಳಿಯುವುದಿಲ್ಲವೇ?

ಇಂಥವರನ್ನು ಆಯ್ಕೆ ಮಾಡಿದ ನಾವೇ ಅವರು ಮಾಡಿದ ಆಣೆ– ಪ್ರಮಾಣದ ದೋಷ ಅನುಭವಿಸಬೇಕಾಗಿದೆ.

–ರಘುನಾಥರಾವ್ ತಾಪ್ಸೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT