ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕನ್ಯೆಯರ ವೈಯಾರದ ಸೊಗಸು

ಪ್ರವಾಸಿಗರ ಸೆಳೆಯುತ್ತಿರುವ ನೀರಸೆಲೆಗಳು
Last Updated 17 ಜೂನ್ 2018, 10:34 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಳೆಗಾಲ ಪ್ರಾರಂಭವಾದೊಡನೆ ತಾಲ್ಲೂಕಿನಲ್ಲಿ ಹತ್ತು ಹಲವು ಜಲಪಾತಗಳು ಮೈದೆಳೆಯುವ ಮೂಲಕ ಪ್ರವಾಸಿಗರ ಮನ ಸೆಳೆಯುತ್ತವೆ. ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುತ್ತವೆ.

ತಾಲ್ಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತ ಸೇರಿದಂತೆ ಸೋಮವಾರಪೇಟೆಯ ಹಲವು ಜಲಪಾತಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಜಲಪಾತದ ದೃಶ್ಯವನ್ನು ಸವಿಯುತ್ತಿದ್ದಾರೆ. ನಿಸರ್ಗ ರಮಣೀಯ ಸೌಂದರ್ಯದ ನಡುವೆ ಹಾಲ್ನೊರೆ ಸೂಸುತ್ತಾ ಜಲಪಾತಗಳು ಪ್ರಕೃತಿಪ್ರಿಯರನ್ನು ತಮ್ಮತ್ತ ಸೆಳೆಯುತ್ತಿವೆ. ಮಲ್ಲಳ್ಳಿ ಜಲಪಾತಕ್ಕೆ ಈಗಾಗಲೇ ಪ್ರವಾಸಿಗರ ದಂಡು ದಾಂಗುಡಿಯಿಡುತ್ತಿದೆ.

ರಾಜ್ಯ ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರೂ ಈಗಾಗಲೇ ಜಲಪಾತದ ವೈಭವವನ್ನು ಅನುಭವಿಸಿದ್ದು, ಶಾಲಾ ಕಾಲೇಜಿನಿಂದಲೂ ತಂಡೋಪತಂಡವಾಗಿ ಜನರು ಜಲಪಾತಕ್ಕೆ ಆಗಮಿಸುತ್ತಿದ್ದಾರೆ.

ಐಗೂರು ಗ್ರಾಮದಲ್ಲಿ ಹರಿಯುವ ಚೋರನ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ದೇವಾಲಯದ ಸಮೀಪದ ಬಂಡೆಕಲ್ಲುಗಳಿಂದ ಧುಮ್ಮಿಕ್ಕುವ ಚೋರನ ಜಲಪಾತ ದಾರಿಹೋಕರು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮಳೆಗಾಲದಲ್ಲಿ ಮಾತ್ರ ಜೀವ ತಳೆಯುವ ಇಲ್ಲಿನ ಜಲಪಾತಗಳನ್ನು ಕೇವಲ ಕೆಲವೇ ತಿಂಗಳು ನೋಡಿ ಅನುಭವಿಸಲು ಸಾಧ್ಯವಿದ್ದು, ಮಳೆ ಸ್ವಲ್ಪ ಬಿಡುವು ನೀಡುವುದರೊಂದಿಗೆ, ಸಾಲು ರಜೆಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT