ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು & ಕಾಶ್ಮೀರ: ಸೇನಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ– ಇಬ್ಬರು ನಾಗರಿಕರು ಸಾವು

Published 23 ಡಿಸೆಂಬರ್ 2023, 5:56 IST
Last Updated 23 ಡಿಸೆಂಬರ್ 2023, 5:56 IST
ಅಕ್ಷರ ಗಾತ್ರ

ಡೋಡಾ: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ಸೇನಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸಾಂಬಾದ ಪರಶೋತ್ತಮ್ (55) ಹಾಗೂ ಕಥುವಾದ ಸೋಮ್ ರಾಜ್‌ (45) ಮೃತರು. ಇವರಿಬ್ಬರು ಅರ್ನೋಡಾ ಘಾಟ್‌ನ ಸೇನಾ ಕ್ಯಾಂಪ್‌ನಲ್ಲಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಸೀಮೆ ಎಣ್ಣೆ ಹೀಟರ್‌ನಲ್ಲಿ (ಚಳಿಗೆ ರಕ್ಷಣೆ ಪಡೆಯುವ ಸಾಧನ) ಸಮಸ್ಯೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಜಾನೆ 2.30ರ ವೇಳೆಗೆ ಬೆಂಕಿ ಅವಘದದ ಬಗ್ಗೆ ಮಾಹಿತಿ ಬಂದಿದ್ದು, ಘಟನಾ ಸ್ಥಳದಿಂದ ಸುಟ್ಟು ಕರಕಲಾದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅವುಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT