ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಮಸ್ಯೆಗಳ ವಿಚಾರದಲ್ಲಿ ಮೌನವಾಗಿ ಇರುವುದು, ಸುಳ್ಳು ಹೇಳುವುದು, ಕ್ಯಾಮರಾಗಳಿಗೆ ಪೋಸ್ ನೀಡುವುದು, ಪ್ರಚಾರಕ್ಕೆ ಆದ್ಯತೆ ಕೊಡುವುದು, ಯಾರ ಮಾತನ್ನೂ ಕೇಳಿಸಿಕೊಳ್ಳದಿರುವುದು, ಉಡುಪಿಗೆ ಆದ್ಯತೆ ನೀಡುವುದು, ಸ್ನೇಹಿತರೊಂದಿಗಷ್ಟೇ ಬೆರೆಯವುದು – ಇವು ಮೋದಿಯವರ ನೆಚ್ಚಿನ ಆಸನಗಳು ಎಂಬರ್ಥದಲ್ಲಿ ಕಾಂಗ್ರೆಸ್ ಕಿಚಾಯಿಸಿದೆ.
ಇದರೊಂದಿಗೆ ಹಲವು ಚಿತ್ರಗಳನ್ನೊಳಗೊಂಡ ವಿಡಿಯೊವನ್ನೂ ಕಾಂಗ್ರೆಸ್ ಹಂಚಿಕೊಂಡಿದೆ.