ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಬಯಕೆ ನಿಯಂತ್ರಣ: ಕಲ್ಕತ್ತಾ ಹೈಕೋರ್ಟ್‌ ಆದೇಶದ ಬಗ್ಗೆ ‘ಸುಪ್ರೀಂ’ ಅಸಮಾಧಾನ

Published 4 ಜನವರಿ 2024, 16:10 IST
Last Updated 4 ಜನವರಿ 2024, 16:10 IST
ಅಕ್ಷರ ಗಾತ್ರ

ನವದೆಹಲಿ: ಹೆಣ್ಣುಮಕ್ಕಳು ‘ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’, ಮಹಿಳೆಯರಿಗೆ ಗೌರವ ನೀಡುವ ತರಬೇತಿಯನ್ನು ಯುವಕರು ತಮಗೆ ಕೊಟ್ಟುಕೊಳ್ಳಬೇಕು ಎಂದು ಹೇಳಿದ್ದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಶ್ನಿಸಿದೆ.

ಹೈಕೋರ್ಟ್ ನೀಡಿದ್ದ ಆದೇಶದ ವಿಚಾರವಾಗಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಸುಪ್ರೀಂ ಕೋರ್ಟ್, ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಆರೋಪಿಯಾಗಿದ್ದ ವ್ಯಕ್ತಿಯು 14 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿಯನ್ನು ಮದುವೆಯಾದ ನಂತರದಲ್ಲಿ, ಆತನನ್ನು ದೋಷಮುಕ್ತಗೊಳಿಸಿದ ಕ್ರಮವನ್ನು ಕೂಡ ಪ್ರಶ್ನಿಸಿದೆ.

‘ಹೈಕೋರ್ಟ್‌ ಮಾತುಗಳು ಮಾತ್ರವೇ ಇಲ್ಲಿನ ಪ್ರಶ್ನೆ ಅಲ್ಲ. ಅಲ್ಲಿ ಹೇಳಿರುವ ಅಂಶಗಳನ್ನು ಗಮನಿಸಿ. ಇಂತಹ ಪರಿಕಲ್ಪನೆಗಳು ಅವೆಲ್ಲಿಂದ ಬರುತ್ತವೆಯೋ ಗೊತ್ತಾಗುತ್ತಿಲ್ಲ. ಆದರೆ ಎಲ್ಲ ಮಾತುಗಳನ್ನೂ ನಾವು ಪರಿಶೀಲಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭೂಯಾನ್ ಅವರಿದ್ದ ಪೀಠವು ಹೇಳಿದೆ.

ಇಂತಹ ಆದೇಶ ಬರೆಯುವುದು ಸಂಪೂರ್ಣವಾಗಿ ತಪ್ಪು ಎಂದು ಪೀಠವು ಮೌಖಿಕವಾಗಿ ಹೇಳಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ನೀತಿ ಬೋಧನೆ ಮಾಡದಿರುವುದು, ತಮ್ಮ ವೈಯಕ್ತಿಕ ದೃಷ್ಟಿಕೋನಗಳನ್ನು ಹೇಳದಿರುವುದು ಅಪೇಕ್ಷಣೀಯ ಎಂದು ಸುಪ್ರೀಂ ಕೋರ್ಟ್‌ ಡಿಸೆಂಬರ್ 8ರಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT