ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎ ಪರೀಕ್ಷೆ ಮುಂದೂಡಿಕೆ: ನಿರಾಕರಿಸಿದ ಸುಪ್ರೀಂ ಕೋರ್ಟ್

Published 29 ಏಪ್ರಿಲ್ 2024, 15:53 IST
Last Updated 29 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಮೇ ತಿಂಗಳಿನಲ್ಲಿ ನಿಗದಿಯಾಗಿದ್ದ ಲೆಕ್ಕ ಪರಿಶೋಧಕರ (ಸಿಎ) ಕೆಲವು ವಿಷಯಗಳ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ಪರೀಕ್ಷೆಗಳನ್ನು ಮತದಾನ ನಡೆಯುವ ದಿನಗಳಂದು ನಿಗದಿ ಪಡಿಸಿಲ್ಲ ಎಂದು ತಿಳಿಸಿದೆ.

ಲೋಕಸಭೆಗೆ ಮೇ 7, 13ರಂದು ಮತದಾನ ನಡೆಯಲಿದ್ದು, 6, 12ರಂದು ಯಾವುದೇ ಪರೀಕ್ಷೆ ನಿಗದಿ ಆಗಿಲ್ಲ. ಇದೀಗ ಪರೀಕ್ಷೆಯ ದಿನಾಂಕವನ್ನು ಬದಲಾಯಿಸುವುದರಿಂದ ಪರೀಕ್ಷೆ ನಡೆಸಲು ಮಾಡಿಕೊಂಡಿರುವ ಸಿದ್ಧತೆಗಳಿಗೆ ಅಡ್ಡಿಪಡಿಸಿದಂತಾಗುತ್ತದೆ ಹಾಗೂ ‘ಕೆಲವು ವಿದ್ಯಾರ್ಥಿಗಳಿಗೆ ಅನ್ಯಾಯ’ ಆಗಬಹುದು ಎಂದು ಅದು ಹೇಳಿದೆ.

ಸಿಎ ಪರೀಕ್ಷೆಗಳು ಮೇ 2ರಿಂದ 17ರವರೆಗೆ ನಡೆಯಲಿವೆ. 7, 13ರಂದು ಮತದಾನ ನಡೆಯಲಿರುವುದರಿಂದ, 8, 14ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಇತರ ದಿನಾಂಕಗಳಿಗೆ ಮುಂದೂಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ದೆಹಲಿ ಹೈಕೋರ್ಟ್ ಸಹ ಮೇ 8ರಂದು ನಡೆಯಲಿರುವ ಸಿಎ ಪರೀಕ್ಷೆ ಮುಂದೂಡಲು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT