ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರು ವಾಸವಿದ್ದ ಕಟ್ಟಡ ಕುಸಿದು 14 ಸಾವು

Published 9 ಜುಲೈ 2023, 14:09 IST
Last Updated 9 ಜುಲೈ 2023, 14:09 IST
ಅಕ್ಷರ ಗಾತ್ರ

ಪೆರ್ನಂಬುಕೊ, ಬ್ರೆಜಿಲ್‌: ನಿರಾಶ್ರಿತರು ವಾಸವಿದ್ದ ಶಿಥಿಲ ಕಟ್ಟಡವೊಂದು ಬ್ರೆಜಿಲ್‌ನ ಪೆರ್ನಂಬುಕೊ ರಾಜ್ಯದ ಪೌಲಿಸ್ತಾದಲ್ಲಿ ಶುಕ್ರವಾರ ಕುಸಿದುಬಿದ್ದಿದ್ದು, 6 ಮಕ್ಕಳು ಸೇರಿದಂತೆ ಒಟ್ಟು 14 ಜನರು ಮೃತಪಟ್ಟಿದ್ದಾರೆ.

ಅವಶೇಷಗಳಡಿ ಸಿಕ್ಕಿಬಿದ್ದಿದ್ದ 15 ವರ್ಷದ ಇಬ್ಬರು ಬಾಲಕಿಯರು, 65 ವರ್ಷದ ವೃದ್ಧೆಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. 18 ವರ್ಷದ ಬಾಲಕನನ್ನು ರಕ್ಷಿಸಿದ್ದರು, ನಂತರ ಆತ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಟ್ಟಡ 2010ರಿಂದ ಪಾಳುಬಿದ್ದಿತ್ತು. ಕೆಲ ವರ್ಷಗಳಿಂದ ನಿರಾಶ್ರಿತರು ವಾಸವಿದ್ದರು ಎಂದು ಪೌಲಿಸ್ತಾದ ಸ್ಥಳೀಯ ಆಡಳಿತ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT