ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video|ಇಂಗ್ಲೆಂಡ್: ಗುಂಡಿಗೆ ಬಿದ್ದ ಹಸು–ಸುರಕ್ಷಿತವಾಗಿ ಹೊರತೆಗೆದ ಸ್ಥಳೀಯರು

Published 12 ಸೆಪ್ಟೆಂಬರ್ 2023, 13:38 IST
Last Updated 12 ಸೆಪ್ಟೆಂಬರ್ 2023, 13:38 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್‌ನ ಡರ್ಹಾಮ್‌ ಹಾಲಿಡೇ ಪಾರ್ಕ್‌ನಲ್ಲಿ ಗುಂಡಿಗೆ ಬಿದ್ದಿದ್ದ ಹಸುವನ್ನು ಜನರು ರಕ್ಷಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ರಾಕ್ಟರ್‌ ಹಾಗೂ ಹಗ್ಗದ ಸಹಾಯದಿಂದ ಹಸುವನ್ನು ಗುಂಡಿಯಿಂದ ಹೊರಕ್ಕೆ ಕರೆತರುವಲ್ಲಿ ಅಲ್ಲಿನ ಸಿಬ್ಬಂದಿ ಮತ್ತು ಸ್ಥಳೀಯ ರೈತರು ಯಶಸ್ವಿಯಾಗಿರುವ ದೃಶ್ಯಗಳು ವಿಡಿಯೊದಲ್ಲಿದೆ. ಆಚ್ಚರಿ ಎಂಬಂತೆ ಹಸುವಿಗೆ ಯಾವುದೇ ಗಾಯಗಳಾಗಿಲ್ಲ

ಹಸು ಗುಂಡಿಯೊಳಕ್ಕೆ ಹೇಗೆ ಬಿತ್ತು ಎಂಬುದು ಗೊತ್ತಾಗಿಲ್ಲ. ಆದರೆ ಇದೀಗ ಹಸು ಸುರಕ್ಷಿತವಾಗಿದೆ ಎಂದು ’ಹಾಲಿಡೇ ಪಾರ್ಕ್ ’ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದೆ' ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

94 ಸೆಕೆಂಡ್‌ ಇರುವ ವಿಡಿಯೊವನ್ನು 'ವಿಟ್ಟನ್ ಕ್ಯಾಸ್ಟಲ್ ಕಂಟ್ರಿ ಪಾರ್ಕ್' ಫೇಸ್‌ ಬುಕ್‌ ಖಾತೆಯಲ್ಲಿ ಹಂಚಿಕೊಂಡಿದೆ. 2.6 ಮಿಲಿಯನ್ ಜನರು ವಿಡಿಯೊವನ್ನು ವೀಕ್ಷಿಸಿದ್ದು , ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT