ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಸ್ಪೇನ್‌ನ ಟೊಮೆಟೊ ಹಬ್ಬದಲ್ಲಿ ಮಿಂದೆದ್ದ ಜನ

Published 30 ಆಗಸ್ಟ್ 2023, 13:59 IST
Last Updated 30 ಆಗಸ್ಟ್ 2023, 13:59 IST
ಅಕ್ಷರ ಗಾತ್ರ

ಸ್ಪೇನ್‌: ಪ್ರತಿ ವರ್ಷದಂತೆ ಈ ವರ್ಷವೂ ಸ್ಪೇನ್‌ನ ಬುನೊಲ್‌ ಗ್ರಾಮದಲ್ಲಿ 76ನೇ ‘ಲಾ ಟೊಮೆಟೊ’ ಹಬ್ಬವನ್ನು ಆಚರಿಸಲಾಗಿದೆ. ಕೈಗೆ ಸಿಕ್ಕಷ್ಟು ಟೊಮೆಟೊಗಳನ್ನು ಎಸೆಯುತ್ತಾ ನೆರೆದಿದ್ದ ಸಾವಿರಾರು ಜನ ಖುಷಿ ಹಂಚಿಕೊಂಡರು. 

ವಿವಿಧ ದೇಶಗಳಿಂದ ಆಗಮಿಸಿದ್ದ ಜನರೂ ಈ ಹಬ್ಬದಲ್ಲಿ ಪಾಲ್ಗೊಂಡರು. ಕಣ್ಣಿನ ರಕ್ಷಣೆಗೆಂದು ಪ್ರತಿಯೊಬ್ಬರೂ ಕನ್ನಡಕವನ್ನು (goggles) ಧರಿಸಿ ಆಟಕ್ಕೆ ಇಳಿದಿದ್ದು ವಿಶೇಷವಾಗಿ ಕಂಡಿತ್ತು. 

ಈ ಹಬ್ಬದಲ್ಲಿ ಡಬ್ಬಿಗಳಲ್ಲಿನ ಟೊಮೆಟೊಗಳನ್ನು ಎತ್ತಿಕೊಂಡು ರಸ್ತೆಯಲ್ಲಿ ನೆರೆದಿರುವ ಸಾವಿರಾರು ಜನ ಪರಸ್ಪರ ಎಸೆದುಕೊಳ್ಳುತ್ತಾರೆ. ಒಂದು ಗಂಟೆಗಳ ಕಾಲ ಆಟವನ್ನು ಆಡಿ ನಂತರ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ಮಾಡುತ್ತಾರೆ.

ಈ ಹಬ್ಬದಲ್ಲಿ ಪಾಲ್ಗೊಳ್ಳಲು ಟಿಕೆಟ್‌ ದರವನ್ನು 12 ಯುರೋ (ಸುಮಾರು ₹1,082) ನಿಗದಿ ಮಾಡಲಾಗಿತ್ತು. ಈ ಬಾರಿ ಟೊಮೆಟೊ ಹಬ್ಬದಲ್ಲಿ ಸುಮಾರು 120 ಟನ್‌ಗಳಷ್ಟು ಟೊಮೆಟೊ ಬಳಸಲಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT