ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಪ್ರಜೆಗೆ ವಂಚನೆ: ಸಿಬಿಐನಿಂದ ₹7.7 ಕೋಟಿಯ ಕ್ರಿಪ್ಟೊ ಕರೆನ್ಸಿ ವಶ

Published 21 ಅಕ್ಟೋಬರ್ 2023, 11:48 IST
Last Updated 21 ಅಕ್ಟೋಬರ್ 2023, 11:48 IST
ಅಕ್ಷರ ಗಾತ್ರ

ನವದೆಹಲಿ: ಬಹುರಾಷ್ಟ್ರೀಯ ಕಂಪನಿ ‘ಅಮೆಜಾನ್‌’ನ ವಂಚನೆ ಪತ್ತೆ ವಿಭಾಗದ ಹಿರಿಯ ಕಾರ್ಯನಿರ್ವಾಹಕನೆಂದು ನಂಬಿಸಿ ಅಮೆರಿಕದ ವ್ಯಕ್ತಿಗೆ ವಂಚಿಸಿದ ಅಹಮದಾಬಾದ್ ಮೂಲದ ವ್ಯಕ್ತಿಯಿಂದ ₹7.7 ಕೋಟಿಗೂ (9.30 ಲಕ್ಷ ಡಾಲರ್‌) ಹೆಚ್ಚು ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಎಫ್‌ಬಿಐ (ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್) ನೀಡಿದ ಮಾಹಿತಿ ಆಧರಿಸಿ ಸಿಬಿಐ, ರಾಮವತ್ ಶೈಶವ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದಾಗ, ಶೈಶವ್ ಅವರ ಇ-ವ್ಯಾಲೆಟ್‌ನಲ್ಲಿ 28 ಬಿಟ್‌ಕಾಯಿನ್, 55 ಎಥೆರಿಯಮ್, 25,572 ರಿಪ್ಪಲ್ ಮತ್ತು 77 ಯುಎಸ್‌ಡಿಟಿ ಪತ್ತೆಯಾಗಿವೆ. ಕ್ರಿಪ್ಟೊ ಕರೆನ್ಸಿಗಳನ್ನು ಜಪ್ತಿ ಮಾಡಿ, ಸರ್ಕಾರದ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು, ಅಮೆರಿಕದ ಪ್ರಜೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ‘ತಾನು ಅಮೆಜಾನ್‌ ಕಂಪನಿಯ ವಂಚನೆ ಪತ್ತೆ ಹಚ್ಚುವ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಜೇಮ್ಸ್ ಕಾರ್ಲ್ಸನ್’ ಎಂಬುದಾಗಿ ಪರಿಚಯಿಸಿಕೊಂಡು, ಅವರಿಗೆ ತಮ್ಮ ಖಾತೆಯಲ್ಲಿದ್ದ ಹಣ ಹಿಂತೆಗೆದುಕೊಂಡು ಕ್ರಿಪ್ಟೊ ಕರೆನ್ಸಿಯಲ್ಲಿ ರೇವಣಿ ಇಡಲು ಪುಸಲಾಯಿಸಿ ವಂಚಿಸಿರುವ ಆರೋಪವನ್ನು ಎದುರಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT