ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಾವು ನ್ಯಾಯವೇ!?

Last Updated 22 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಗುರುವಾಯನಕೆರೆ: ಬಾಲಕನ ಶವ‍ಪತ್ತೆ’ (ಪ್ರ.ವಾ., ಜುಲೈ 27) ಶೀರ್ಷಿಕೆಯಡಿ ಪ್ರಕಟವಾದ ಫೋಟೊ– ವರದಿ ನೋಡಿ ನನ್ನ ಮನ ಕಲಕಿತು. ಈ ಸಾವು ನ್ಯಾಯವೇ? ನೀವೇ ಹೇಳಿ. ನಮ್ಮ ಇಂದಿನ ಪ್ರಧಾನಿ, ಅವರೇ ಹೇಳುವಂತೆ ‘ಚಾಯ್‌ವಾಲಾ’. ನಮ್ಮ ಉನ್ನತ ಶಿಕ್ಷಣ ಸಚಿವರು ಓದಿರುವುದು 8ನೇ ತರಗತಿವರೆಗೆ. ನಮ್ಮ ಮುಖ್ಯಮಂತ್ರಿಯವರು ಚಲನಚಿತ್ರ ನಿರ್ಮಾಪಕರು. ಆದರೂ ನಮ್ಮ ದೇಶ ಚೆನ್ನಾಗಿ ನಡೆಯುತ್ತಿದೆ.

ಬೆಂಗಳೂರಿನ ಯಶವಂತ 9ನೇ ಕ್ಲಾಸ್ ಫೇಲ್. ಅವನ ಶವ ದಕ್ಷಿಣ ಕನ್ನಡದ ಗುರುವಾಯನಕೆರೆಯ ತಡಿಯಲ್ಲಿ ಪತ್ತೆ. ಭಾರವಾದ ಸ್ಕೂಲ್‌ಬ್ಯಾಗ್ ಮತ್ತು ಅವನ ಶೂ, ಅವನೊಂದಿಗೆ ಅದೇ ತಡಿಯಲ್ಲಿ ಬಿಟ್ಟುಹೋಗಿದ್ದಾನೆ. ಈ ಬಾಲಕನ ಸಾವಿಗೆ ಕಾರಣ ಬ್ಲೂವೇಲ್ ಆಟ ಎಂದೂ ಶಂಕಿಸಲಾಗಿದೆ. ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ, ಮಾನಸಿಕ ಒತ್ತಡಕ್ಕೆ ಸಿಲುಕಿ ಮನೆ ಬಿಟ್ಟ ಬಾಲಕ ಬದುಕಲಾರದಾದ. ಪೋಷಕರೇ, ಅಧ್ಯಾಪಕರೇ...! ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ಫೇಲಾದವರು ಮತ್ತೆ ಪಾಸಾಗಬಹುದು. ಬದುಕಿನ ಪಯಣದಲ್ಲೂ ಪಾಸ್ ಆಗಬಹುದು. ಅದಕ್ಕೆ ಅವಕಾಶ ಕೊಡಿ.

ಕಾಸರಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT