ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ ಪರಂಪರೆಗೆ ಅವಮಾನ

Last Updated 31 ಮಾರ್ಚ್ 2019, 20:00 IST
ಅಕ್ಷರ ಗಾತ್ರ

‘ಅಡ್ಡಪಲ್ಲಕ್ಕಿ ಉತ್ಸವ ಬೇಕಿಲ್ಲ’ ಎಂದಿದ್ದಾರೆ ಕಾಶಿಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ.ಮಾನವ ಘನತೆಯನ್ನು ಎತ್ತಿ ಹಿಡಿಯುವ ಯಾರೂ ಅಡ್ಡಪಲ್ಲಕ್ಕಿ ಉತ್ಸವವನ್ನು ಒಪ್ಪಲಾಗದು. ಇದು, ಭಕ್ತಿಪರಂಪರೆಗೇ ಅವಮಾನ.

ವೈಚಾರಿಕ–ವೈಜ್ಞಾನಿಕ ಬೆಳವಣಿಗೆಯನ್ನು ಸಹಿಸದೆ, ಮೂಢನಂಬಿಕೆಯನ್ನೇಬಿತ್ತಿ ಬೆಳೆಯುವಕೆಲವೇ ಕೆಲವರು ಅಡ್ಡಪಲ್ಲಕ್ಕಿಯನ್ನು ಸಮಾಜದ ಮೇಲೆ ಹೇರುತ್ತಿದ್ದಾರೆ. ಆ ಮೂಲಕ, ಮಾನವಘನತೆಯನ್ನು ಎತ್ತಿ ಹಿಡಿದ ಶರಣ ಸಂಸ್ಕೃತಿಗೆ ದ್ರೋಹ ಬಗೆಯುತ್ತಿದ್ದಾರೆ.

ಇದರಿಂದಾಗಿ ಭಕ್ತಿಗೆ ಅಸಮಾನತೆಯವೇಷ ತೊಡಿಸಿ, ಪಾಳೆಗಾರಿಕೆ ಸಂಸ್ಕೃತಿಗೆ ನೀರೆರೆದಂತಾಗುತ್ತಿದೆ. ಆದ್ದರಿಂದ ಕಾಶಿಪೀಠದ ಶ್ರೀಗಳಮಾರ್ಗವನ್ನೇ ಬೇರೆ ಸ್ವಾಮಿಗಳೂ ಅನುಸರಿಸಬೇಕು.

- ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT