ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿ ಸರಕುಗಳಾದ ನಂಬಿಕೆಗಳು!

Last Updated 20 ಡಿಸೆಂಬರ್ 2018, 19:42 IST
ಅಕ್ಷರ ಗಾತ್ರ

ಜನರಿಗೆ ಸನ್ಮಾರ್ಗದಲ್ಲಿ ಬದುಕುವ ದಾರಿ ತೋರಿಸಬೇಕಾದ ಮಠ– ಮಂದಿರಗಳು, ಪೀಠಾಧಿಪತಿಗಳು ಭಕ್ತರ ದಿಕ್ಕು ತಪ್ಪಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ದೇವರು, ಧರ್ಮ, ನಂಬಿಕೆ, ಭಕ್ತಿ, ಆಚರಣೆ, ಹರಕೆಗಳೆಂಬ ಜನರ ಭಾವನಾತ್ಮಕ ವಿಚಾರಗಳನ್ನು ಬಂಡವಾಳ ಮಾಡಿಕೊಂಡು, ಕೆಲವರು ವೈಭವದ ಜೀವನ ನಡೆಸುವುದು ಕಂಡು ಬರುತ್ತಿದೆ.

ಜನರಿಗೆ ಶಾಂತಿ ನೆಮ್ಮದಿ ನೀಡಿ ಅವರಲ್ಲಿ ಜೀವನೋತ್ಸಾಹ ತುಂಬಬೇಕಾದ ಸ್ಥಳಗಳು ವ್ಯಾಪಾರೀಕರಣಗೊಂಡಿವೆ. ಏನೂ ಅರಿಯದ ಮುಗ್ಧ ಜನರು ನಂಬಿಕೆಗಳೆಂಬ ಶೂಲಕ್ಕೆ ಬಲಿಯಾಗುತ್ತಿದ್ದಾರೆ.

ದೇವರು, ದೈವದ ಹೆಸರಿನಲ್ಲಿ ನಡೆಯುವ ಮೌಢ್ಯಗಳಿಗೆ ಕಡಿವಾಣ ಹಾಕುವುದು, ಜನರ ಮನೋ ಧೋರಣೆಗಳಲ್ಲಿ ವೈಚಾರಿಕ, ವೈಜ್ಞಾನಿಕ ಮತ್ತು ಪ್ರಗತಿಪರವಾದ ಚಿಂತನೆಗಳನ್ನು ಬಿತ್ತುವುದು ಇಂದಿನ ತುರ್ತಾಗಿದೆ. ಸುಳ್ವಾಡಿಯಲ್ಲಿ ನಡೆದ ಘಟನೆಯಿಂದಲಾದರೂ ಪಾಠ ಕಲಿತು, ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT