ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪದ ಸೋಗಿನಲ್ಲಿ ನಯವಂಚನೆ

Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ಜಗತ್ತಿಗೇ ಜೀವಕಾರುಣ್ಯವನ್ನು ಬೋಧಿಸಿದ ಬುದ್ಧರ ಪವಿತ್ರ ಸ್ಥಳವಾದ ಬೋಧಗಯಾದ ಮಹಾಬೋಧಿ ಬುದ್ಧಮಂದಿರದಲ್ಲಿ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದರಿಂದ ಉಂಟಾದ ಆತಂಕ ಮರೆಯಾಗುವ ಮುನ್ನವೇ ಮತ್ತೊಂದು ಆತಂಕ ಎದುರಾಗಿದೆ.

ಅದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೌದ್ಧಮಂದಿರದಲ್ಲಿ ಹೋಮ ನಡೆಸಿರುವುದು (ಪ್ರ.ವಾ ಚಿತ್ರ, ಜುಲೈ 21). ಬುದ್ಧ ಸನ್ನಿಧಿಯಲ್ಲಿ ಹೋಮ ಮಾಡುವ ಮೂಲಕ ಬುದ್ಧಭಾರತವನ್ನು ನಯವಂಚನೆಯಿಂದ ಕೆಡವಲು ಹೊರಟಿರುವುದು ಅಪಾಯಕಾರಿ.

ಹೋಮ ಮುಂತಾದ ಮೌಢ್ಯಪದ್ಧತಿಗಳ ವಿರುದ್ಧ ಬಂಡಾಯ ಸಾರಿದ್ದ ಬುದ್ಧನ ಬೋಧನೆಗಳ ಅರಿವಿನ ಕ್ರಾಂತಿಯನ್ನು ಅರಿಯದೆ ಅನುಕಂಪದ ಸೋಗಿನಲ್ಲಿ ಬುದ್ಧಮಂದಿರದಲ್ಲಿ ಹೋಮ ನಡೆಸಿರುವುದು ಇಡೀ ಬುದ್ಧಭಾರತಕ್ಕೆ ಮಾಡಿದ ಬಹುದೊಡ್ಡ ಅವಮಾನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT