ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಎಚ್ಚರಿಕೆ ನೀಡಿ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಚುಂಚನಕಟ್ಟೆ ಜಲಪಾತವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸಿಎಫ್‌ಟಿಆರ್‌ಐನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜ್ಞಾನಿಯೊಬ್ಬರು ಕೆಲವು ದಿನಗಳ ಹಿಂದೆ ಇಲ್ಲಿ ನೀರಿನಲ್ಲಿ ಕೊಚ್ಚಿ ಹೋದರು. ಅದಕ್ಕೆ ಸಂಬಂಧಿಸಿದ ವಿಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇತ್ತೀಚೆಗೆ ಈ ಸ್ಥಳಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾವುದೇ ಎಚ್ಚರಿಕೆ ಫಲಕ ಕಾಣಸಿಗಲಿಲ್ಲ (ಸಾರ್ವಜನಿಕರಿಂದ ಬಂಡೆಯ ಮೇಲೆ ಬರೆದಿರುವ ಒಂದು ಅಸ್ಪಷ್ಟ ಬರವಣಿಗೆ ಹೊರತುಪಡಿಸಿ). ಪ್ರವಾಸಿಗರು ಜಲಪಾತದ ತೀರಾ ಸಮೀಪಕ್ಕೆ ತೆರಳಿ ನೀರಿನಲ್ಲಿ ಆಟವಾಡುತ್ತಾರೆ. ಇನ್ನು ಗುಂಪಾಗಿ ಬರುವ ಯುವಕ– ಯುವತಿಯರನ್ನು ಕೇಳಬೇಕೇ? ಅಪಾಯದ ಪರಿವೇ ಇಲ್ಲದ ಪಕ್ಷಿಗಳಂತೆ ಇರಬಯಸುತ್ತಾರೆ.

ಆದಕಾರಣ ಸೂಚನಾ ಫಲಕಗಳನ್ನು ಅಳವಡಿಸುವುದು ತುರ್ತು ಅಗತ್ಯ. ಜತೆಗೆ ಜಲಪಾತದ ಅಪಾಯಕಾರಿ ಸ್ಥಳಗಳಲ್ಲಿ ಕಬ್ಬಿಣದ ಕಂಬಿಗಳನ್ನು ಅಳವಡಿಸುವ ಮುಖಾಂತರ ಅಪಘಾತಗಳನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT