ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಭ್ಯಕರ ವರ್ತನೆ

Last Updated 30 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಎಚ್‌ಡಿಕೆ-ಹೆಗ್ಡೆ ವಾಕ್ಸಮರ~ ತಾರಕಕ್ಕೇರಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಅಸಭ್ಯವಾದ ಪರಸ್ಪರ ದೋಷಾರೋಪಗಳ ಪ್ರಭಾವ ಸಮಾಜದ ಮೇಲೆ ಹೇಗಿರಬಹುದೆಂಬುದನ್ನು ಇಬ್ಬರೂ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಅದೇನಿದ್ದರೂ ಪುಕ್ಕಟೆ ಮನರಂಜನೆ ಮಹಾಜನತೆಗೆ ಸಿಗುತ್ತಿದೆ.

ಮಾಜಿ ಮುಖ್ಯಮಂತ್ರಿಯವರ ಅಸಭ್ಯ ಆರೋಪಕ್ಕೆ ನ್ಯಾಯಮೂರ್ತಿ ಹೆಗ್ಡೆಯವರು ಮೌನವಹಿಸುವುದರ ಮೂಲಕ ಪರಿಣಾಮಕಾರಿಯಾದ ಉತ್ತರ ಕೊಡಬಹುದಿತ್ತು. ಹಾಗಾಗದೆ, ನ್ಯಾಯಮೂರ್ತಿಗಳೂ ಕೆಸರೆರೆಚಾಟದ ಸ್ಪರ್ಧೆಯಲ್ಲಿ ತೊಡಗಿರುವುದು ಗಾಬರಿ ಹುಟ್ಟಿಸುವಂತಿದೆ.

ಕಾಚಾ ಹಾಕಿಕೊಂಡು ಕುಸ್ತಿಗೆ ಕರೆದವರ ಜೊತೆ ಕಾದಾಡಲು ಹಿಂಜರಿಯಬೇಕಿಲ್ಲ. ಆದರೆ ಕಾಚಾ ಬಿಚ್ಚಿ ಹಾಕಿ, ತೊಡೆ ತಟ್ಟುತ್ತಾ ಮುಂದೆ ನಿಂತ ಎದುರಾಳಿಗೆ ಶರಣಾಗತನಾಗುವುದೊಂದೇ ಸಭ್ಯಮಾರ್ಗ ಎಂಬ ಸರಳ ಲೋಕಾರೂಢಿ ಸಂಗತಿ ನಮ್ಮ ಬಹುದೊಡ್ಡ ನ್ಯಾಯ ಪಂಡಿತರಿಗೇಕೆ ಹೊಳೆಯಲಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT