ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮಾಯೆ

ಅಕ್ಷರ ಗಾತ್ರ

ಗೊತ್ತಾಯಿತು...
ಮೋದಿ ಸೂಟಿನ ದರ್ಜಿಯ ಹೆಸರು,
ಸಿದ್ದರಾಮಯ್ಯ ವಾಚಿನ ಬೆಲೆ,
ಅ೦ಬಾನಿ ಮನೆಯ ಅಷ್ಟೈಶ್ವರ್ಯ,
ಸನ್ನಿ ಲಿಯೋನ್ ಒಳಉಡುಪಿನ ಬ್ರ್ಯಾಂಡ್‌
ಬಾಬಾ ರಾಮ್‌ದೇವ್‌ ವ್ಯಾಪಾರ ಸಾಮರ್ಥ್ಯ
ಆದರೆ, ಗೊತ್ತಾಗಲೇ ಇಲ್ಲ...
ಮೃತ ಯೋಧನ ಪುಟ್ಟ ಮಗುವಿನ ಭವಿಷ್ಯ
ಚಳಿಗೆ ನಡುಗಿ ಬಸ್‌ಸ್ಟ್ಯಾಂಡಿನಲ್ಲಿ ಸತ್ತ
ವೃದ್ಧನ ಮಾಹಿತಿ
ಬೀದಿಯಲ್ಲೇ ಹೆತ್ತ ಭಿಕ್ಷುಕಿಯ ಮಗುವಿನ ಕತೆ
ಸ್ವಚ್ಛ ಮಾಡಲು ಮ್ಯಾನ್‌ಹೋಲ್‌ಗೆ
ಇಳಿದವನಿಗೆ ಉಸಿರುಗಟ್ಟಿದ್ದು
ಮಾರ್ಕೆಟ್‌ನಲ್ಲಿ ಕಾಮುಕರಿಂದ ಚಿ೦ದಿಯಾದ
ಹೆಣ್ಣು ಯಾರೆಂಬುದು,
ಮಾಹಿತಿಯೇ ಸಿಗದು ಕೊನೆವರೆಗೂ,
ನಾಳೆ ನೇಣು ಹಾಕಿಕೊಳ್ಳಲು ಹಗ್ಗ
ಹೊಸೆಯುತ್ತಿರುವ ರೈತ ಯಾರೆಂದು,
ಜಾಗೃತರಾಗೋಣ
ಪ್ರಬುದ್ಧ ಸಮಾಜ ಕಟ್ಟೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT