ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಸಂಹಿತೆ ಸೂಕ್ತ

Last Updated 6 ಜುಲೈ 2016, 19:30 IST
ಅಕ್ಷರ ಗಾತ್ರ

ವಿವಾದಾತ್ಮಕ  ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದನ್ನು  ಜಾರಿಗೊಳಿಸುವ ಬಗ್ಗೆ ಹಲವಾರು ದಶಕಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಇಲ್ಲಿಯವರೆಗೂ ಸಹಮತ ಸಾಧ್ಯವಾಗಿಲ್ಲ ಎಂಬುದು ವಿಷಾದದ ಸಂಗತಿ.

ಕೆಲವು ರಾಜಕೀಯ ಪಕ್ಷಗಳು, ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಉದ್ದೇಶದಿಂದ  ವಿರೋಧಿಸಿದ್ದವು. ಕೆಲವು ಮುಸ್ಲಿಂ ಸಂಘಟನೆಗಳು ತಮ್ಮ ವೈಯಕ್ತಿಕ ಕಾನೂನಿಗೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅದರ ಜಾರಿ ಸಾಧ್ಯವಾಗಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಜನರ ಅಭಿಪ್ರಾಯಗಳೂ ಬದಲಾದಂತಿವೆ.

ಪ್ರಜ್ಞಾವಂತ ಯುವ ಪೀಳಿಗೆ ಮತ್ತು ಮಹಿಳೆಯರು ಏಕರೂಪದ ನಾಗರಿಕ  ಸಂಹಿತೆಯ ಪರವಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಸುಡಾನ್‌ನಂತಹ ಕಟ್ಟಾ ಮುಸ್ಲಿಂ ರಾಷ್ಟ್ರದಲ್ಲಿಯೂ ಇಂತಹ ಕಾನೂನು ಜಾರಿಯಲ್ಲಿದೆ. ಭಾರತ ದಲ್ಲಿ ಎಲ್ಲ ರಾಜ್ಯಗಳಿಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಲಾಗಿದೆ.

ಹಲವು ಧರ್ಮೀಯರು ವಾಸಿಸುವ ಗೋವಾದಲ್ಲಿ ಇಂತಹ ದ್ದೊಂದು ಸಂಹಿತೆ ಜಾರಿಗೊಳಿಸಲು ಸಾಧ್ಯವಾಗಿರುವಾಗ ಉಳಿದ ರಾಜ್ಯಗಳಲ್ಲಿ ಏಕೆ ಆಗುತ್ತಿಲ್ಲ?

ಈ ವಿಷಯ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಕೇಂದ್ರ ಸರ್ಕಾರವು ಎಲ್ಲ ವರ್ಗಗಳು ಮತ್ತು ಧರ್ಮೀಯರ ಅಭಿಪ್ರಾಯ ಪಡೆದು ಆ ಬಳಿಕ ಇದನ್ನು ಜಾರಿಗೊಳಿಸುವುದು ಒಳ್ಳೆಯದು. ಒಟ್ಟಾರೆ ಸಮಾಜಕ್ಕೆ ಒಳಿತಾಗುವುದಾದರೆ ರಾಜಕೀಯ ಪಕ್ಷಗಳು ಇಂಥ ಪ್ರಯತ್ನಕ್ಕೆ ಕೈಜೋಡಿಸಬೇಕು. ಇದೇ ಜಾತ್ಯತೀತ ಕಲ್ಪನೆಯ ನಿಜಸ್ವರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT