ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಹೇಳಿಕೆ ಸರಿಯಲ್ಲ

ಅಕ್ಷರ ಗಾತ್ರ

ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವ­ವಿದ್ಯಾ­ಲ­ಯದ ಕುಲಪತಿ ಡಾ. ಶ್ರೀಪ್ರಕಾಶ್‌ ಅವರು, ‘ಹಳ್ಳಿ­ಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಮಾಡ­ಬೇಕೆಂದು, ಮಾಡ­ದ­ವರಿಗೆ ₨ 10 ಲಕ್ಷ ದಂಡ ಹಾಕುವ ಆದೇಶ ಸರಿಯಲ್ಲ. ಹಾಗೆ ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವುದನ್ನು ವೈದ್ಯರ ಇಷ್ಟಕ್ಕೆ ಬಿಡ­­­ಬೇಕು’ ಎಂದಿದ್ದಾರೆ.

ಸರ್ಕಾರಿ ಕೋಟಾದ ಸೀಟು ಪಡೆದು ಜನರ ತೆರಿಗೆ ಹಣದಲ್ಲಿ ವೈದ್ಯ­ರಾದವರು ಒಂದು ವರ್ಷ­ವಾ­ದರೂ ಹಳ್ಳಿಗಳಲ್ಲಿ ಸೇವೆ ಮಾಡಲೇಬೇಕೆಂಬ ಆದೇಶ ಜನಪರ­ವಾ­ದದ್ದು; ‘ಸೇವೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿ’ ಎಂದು ಹೇಳ­-­ಬೇಕಾದ ಸ್ಥಾನ­ದಲ್ಲಿ­ರು­ವವರು ಸರ್ಕಾರದ ಆದೇಶಕ್ಕೆ ವಿರುದ್ಧ­ವಾದ ಹೇಳಿಕೆ ನೀಡು­ವು­ದು ಸರಿ­ಯಲ್ಲ. ಸ್ವಇಚ್ಛೆ­ಯಿಂದ ವೈದ್ಯರು ಹೋಗ­ದೆ ಇರು­ವು­­ದರಿಂದಲೇ ಆದೇಶ ಮಾಡ­ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT