ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟೇ ಇಲ್ಲಿ ಏಟು

ಕುಂದು ಕೊರತೆ
Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆಲವೇ ಕೆಲವು ಪ್ರಭಾವಿ ವಾರ್ಡ್‌ಗಳಲ್ಲಿ ಕಾಡುಗೋಡಿಯೂ ಒಂದು. ಎಲ್ಲಾ ವಾರ್ಡ್‌ಗಳ ರೀತಿ ಇಲ್ಲಿ ಕೂಡ ಸಮಸ್ಯೆಗಳಿವೆ. ಅವುಗಳಲ್ಲಿ ಪ್ರಮುಖ ಸಮಸ್ಯೆ ಎಂದರೆ ಚಿಕ್ಕ ರೈಲ್ವೆ ಗೇಟಿನಿಂದಾಗಿ ಸೃಷ್ಟಿಯಾಗುವ ಟ್ರಾಫಿಕ್‌ ಸಮಸ್ಯೆ.

ಊರಿನ ಮಧ್ಯಭಾಗದಲ್ಲಿರುವ ಈ ಚಿಕ್ಕ ಗೇಟು ಊರಿನ ಎರಡು ಭಾಗಗಳಿಗೆ ಸೇತುವೆಯಂತಿದೆ. ಕಾಡುಗೋಡಿಯಲ್ಲಿ ಪ್ರತಿದಿನ ಸುಮಾರು 90ರಿಂದ 100 ರೈಲುಗಳು ಸಂಚರಿಸುತ್ತವೆ. ಆಗ ಗೇಟನ್ನು ಮುಚ್ಚಲಾಗುತ್ತದೆ. ಪ್ರತಿ ದಿನವೂ ಸುಮಾರು 20ರಿಂದ 30 ಬಾರಿ ಗೇಟನ್ನು ಮುಚ್ಚಲಾಗುತ್ತದೆ. ಅಂದರೆ ಪ್ರತಿ ಗಂಟೆಗೆ 15–20 ನಿಮಿಷಗಳ ಕಾಲ ಗೇಟ್‌ ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಳದಿಂದ ಜನರು ಗೇಟ್‌ ದಾಟಲು ಹರಸಾಹಸ ಪಡಬೇಕು.

ಅದರಲ್ಲೂ ಗುರುವಾರ ಸಂತೆ ಇರುವ ಕಾರಣದಿಂದಾಗಿ ಸೃಷ್ಟಿಯಾಗುವ ದಟ್ಟಣೆಯನ್ನು ದಾಟಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಅಲ್ಲದೆ ಪ್ರತಿದಿನ ಸುಮಾರು ಮೂರು ಗಂಟೆಗೆ ಶಾಲೆ ಕಾಲೇಜುಗಳು ಬಿಡುವ ಸಮಯವಾಗುವುದರಿಂದ ಆ ಸಮಯದಲ್ಲಿ ಗೇಟನ್ನು ದಾಟಲು ಸುಮಾರು 45 ನಿಮಿಷ ಬೇಕಾಗುತ್ತದೆ. ಅಲ್ಲದೆ ರಸ್ತೆ ಚಿಕ್ಕದಾಗಿರುವುದು ಮತ್ತು ಬೈಕ್‌ಗಳ ಸಂಚಾರ ಇರುವುದರಿಂದ ಅವಘಡಗಳು ಹೆಚ್ಚಾಗುತ್ತಿವೆ. ಆದಷ್ಟು ಬೇಗ ಶಾಸಕರು, ಅಧಿಕಾರಿಗಳು ಮತ್ತು  ಕಾರ್ಪೊರೇಟರ್‌ಗಳು ಈ ಬಗ್ಗೆ ಗಮನಹರಿಸಿ ಇಲ್ಲಿ ಅಂಡರ್‌ ಪಾಸ್‌ ಅಥವಾ ಫ್ಲೈ  ಓವರ್‌ ನಿರ್ಮಿಸಬೇಕೆಂದು ಈ ಮೂಲಕ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT