ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣಪೀಡಿತ ಅಂಚೆ

Last Updated 11 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹಿಂದೆ ಹೆಚ್ಚು ಬಳಕೆಯಲ್ಲಿದ್ದ ಅಂಚೆ ಮತ್ತು ತಂತಿ ಕಾರ್ಯಗಳಲ್ಲಿ ಈಗ ತಂತಿ ಭಾಗ ಅಂತರ್ಜಾಲದ ಪ್ರಗತಿಯಿಂದಾಗಿ ಕಣ್ಮರೆಯಾಗಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಪರ್ಕ ಜಾಲ ಹೊಂದಿರುವ ನಮ್ಮ  ಅಂಚೆ ಇಲಾಖೆ ಕಾಲಕ್ರಮೇಣ ಖಾಸಗಿ ಕೊರಿಯರ್‌ಗಳ ಹಾವಳಿಯಿಂದ ಪೂರ್ಣ ಮೂಲೆಗುಂಪಾಗುವ ಆತಂಕದಲ್ಲಿದೆ.

ಶೀಘ್ರ ರವಾನೆ ಮತ್ತು ಚಟುವಟಿಕೆಗಳ ಈ ಕಾಲದಲ್ಲೂ ಇಲಾಖೆ ಇನ್ನೂ ಹಳೆಯ ಪದ್ಧತಿ ಅನುಸಾರ ಕಾಲ್ನಡಿಗೆಯ ವೇಗವನ್ನೇ ಅವಲಂಬಿಸಿದೆ. ಉದಾಹರಣೆಗೆ, ಕೊರಿಯರ್ ಸಂಸ್ಥೆಯವರು ಹೆಚ್ಚು ವ್ಯವಹಾರವಿರುವ ಸಂಸ್ಥೆಗಳಿಗೆ ಖುದ್ದಾಗಿ ಹೋಗಿ ವಿಲೇವಾರಿ ಮಾಡುವ ಪತ್ರ ಹಾಗೂ ಪಾರ್ಸಲ್‌ಗಳಿಗೆ ಅಂಗೀಕಾರದ ರಸೀದಿಗಳನ್ನು ಕೊಟ್ಟು ತೆಗೆದುಕೊಂಡು ಹೋಗುತ್ತಾರೆ.

ಆದರೆ ಅಂಚೆ ಇಲಾಖೆಯು ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ. ಆದಕಾರಣ ಪತ್ರಗಳು ತಲುಪುವುದು ವಿಳಂಬವಾಗುತ್ತಿದೆ. ಅದರಿಂದ ಜನ ಕೊರಿಯರ್‌ ಸೇವೆಯನ್ನು ಅವಲಂಬಿಸುತ್ತಿದ್ದಾರೆ.

ಸುಭದ್ರ ಮತ್ತು ವಿಶಾಲ ತಳಹದಿಯ ಅಂಚೆ ಇಲಾಖೆಯು ಕೊರಿಯರ್‌ ಸಂಸ್ಥೆಗಳ ವೃತ್ತಿಪರತೆಯನ್ನು  ಅಳವಡಿಸಿಕೊಂಡು ಮುಂದುವರಿಯುವುದು ಕ್ಷೇಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT