ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆಸ್ತಿ

Last Updated 15 ಜೂನ್ 2016, 19:30 IST
ಅಕ್ಷರ ಗಾತ್ರ

ಜನರ ಆಸ್ತಿಯಾದ ಆಂಬುಲೆನ್ಸ್‌, ಬಸ್ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ವತ್ತುಗಳ ಮೇಲೆ ಮುಖ್ಯಮಂತ್ರಿ ಅಥವಾ ಸಚಿವರ ಭಾವಚಿತ್ರಗಳನ್ನು ಹಾಕುವುದು ಎಷ್ಟು ಸರಿ? ಕೆಲವೆಡೆ ಸಂಸದರು,

ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಸಾರ್ವಜನಿಕ ಹಣದಿಂದ ಕೆಲವು ಸೌಲಭ್ಯಗಳನ್ನು ಕಲ್ಪಿಸಿ ಅವುಗಳ ಮೇಲೆ ತಮ್ಮ ಭಾವಚಿತ್ರ ಅಥವಾ ಹೆಸರು ಹಾಕಿಸಿಕೊಳ್ಳುತ್ತಾರೆ. ಅನೇಕ ಕಡೆಗಳಲ್ಲಿ ಇವು ಅವರ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿ  ಭಗ್ನವಾಗಿರುತ್ತವೆ ಅಥವಾ ಸಗಣಿ ಎಸೆತದಿಂದ ವಿರೂಪಗೊಂಡಿರುತ್ತವೆ.

ಅವರ ಅಧಿಕಾರಾವಧಿ ಮುಗಿದ ನಂತರ ಬರುವವರು ಹಳೆಯದನ್ನು ಅಳಿಸಿ ತಮ್ಮ ಹೆಸರು ಹಾಗೂ ಭಾವಚಿತ್ರ ಹಾಕಿಸಲು ಮತ್ತೊಮ್ಮೆ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಾರೆ. ತೋರ್ಪಡಿಸಿಕೊಳ್ಳದೆ ಜನಸೇವೆ ಮಾಡುವುದು ಎಲ್ಲರ ಶ್ರೇಷ್ಠಧರ್ಮವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT