ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಭವಿಷ್ಯವಿದೆಯೇ?

Last Updated 11 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಯಡಿಯೂರಪ್ಪ ಅವರ ಮೇಲಿದ್ದ ಗಣಿ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತ ನಡೆಸಬೇಕಿದ್ದ ತನಿಖೆಯನ್ನು ಹೈಕೋರ್ಟ್, ಸರ್ಕಾರ ಸಲ್ಲಿಸಿದ್ದ ದಾಖಲೆಗಳ ಅಧಾರದ ಮೇಲೆ ರದ್ದುಗೊಳಿಸಿದೆ. ಆದರೂ ಯಡಿಯೂರಪ್ಪ ಅವರ ಮಕ್ಕಳ ಸಹಭಾಗಿತ್ವದ ಟ್ರಸ್ಟ್‌ಗಳಿಗೆ ಕಂಪೆನಿಗಳಿಂದ ಸಂದಾಯವಾದ ಹಣ ಯಾವ ಕಾರಣಕ್ಕಾಗಿ, ಯಾವ ಸಮಯದಲ್ಲಿ ಎಂಬ ಸಂಶಯ ಜನರಲ್ಲಿ ಉಳಿದೇ ಇದೆ. ಇದುವರೆಗೆ ಈ ಪ್ರಕರಣ ಕೇಂದ್ರದ 2ಜಿ ಸ್ಪ್ರೆಕ್ಟ್ರಂ ಹಗರಣದ ಕನಿಮೊಳಿ ಕೇಸ್‌ಗಿಂತ ವಿಭಿನ್ನವಾಗಿಲ್ಲ ಎಂಬುದು ಜನ ಸಾಮಾನ್ಯರ ಅಭಿಪ್ರಾಯವಾಗಿತ್ತು.

ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮೊದಲೇ ಇಂತಹ ಸಂಸ್ಥೆಗಳು ಅವರಿಗೆ ಹೀಗೆ ಉದಾರವಾಗಿ ದಾನ ನೀಡಿವೆಯೇ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೂ ಹೀಗೆ ಕೋಟ್ಯಂತರ ರೂಪಾಯಿ ದಾನ ಕೊಟ್ಟಿವೆಯೇ? ಯಡಿಯೂರಪ್ಪ ಮಕ್ಕಳು, ಅಳಿಯಂದಿರ ಟ್ರಸ್ಟ್‌ಗಳು ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿವೆಯೇ? ಅಥವಾ ಕಿವುಡ, ಮೂಗರು, ಅಂಗವಿಕಲರು, ವಿಧವೆಯರಿಗೆ ಸಹಾಯ ಮಾಡಿದ ಉದಾಹರಣೆ ಇದೆಯೇ?
ಈ ದೇಶವನ್ನು ಲೂಟಿ ಹೊಡೆದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಅಕ್ರಮ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ, ನಮ್ಮ ಕಟ್ಟ ಕಡೆಯ ಭರವಸೆಯ ನ್ಯಾಯಾಲಯಗಳಾದರೂ ಇನ್ನಷ್ಟು ಸತ್ಯಶೋಧಕವಾಗಿ, ನಿರ್ದಾಕ್ಷಿಣ್ಯವಾಗಿ, ವಿಚಾರಣೆ ನಡೆಸಿ ಶಿಕ್ಷಿಸದಿದ್ದರೆ ಖಂಡಿತಾ ನಮ್ಮ ದೇಶಕ್ಕೆ ಭವಿಷ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT