ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಾರೋಹಣ ಭತ್ಯೆ ಹೊರೆಯಲ್ಲ...

Last Updated 3 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

‘ಧ್ವಜಾರೋಹಣಕ್ಕೂ ಭತ್ಯೆ ಬೇಕೇ?’ (ವಾ.ವಾ, ಸೆ. 24) ಕುರಿತಂತೆ ಈ ಪತ್ರ. ಸ್ವಾತಂತ್ರ್ಯ ಯೋಧರಿಗೆ ಸರ್ಕಾರವು  ಉಚಿತ ನಿವೇಶನಗಳನ್ನು ಅವರವರ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಒದಗಿ­ಸಿರುವುದು, ಜತೆಗೆ ಅವರಿಗೂ ಅವರ ಅವಿವಾಹಿತ ಹೆಣ್ಣುಮಕ್ಕಳಿಗೂ ಮಾಸಾಶನ ಕೊಡುತ್ತಿರುವುದು ಸ್ವಾಮಿಯವರ ಗಮನಕ್ಕೆ ಬಂದಂತಿಲ್ಲ.

ಹೀಗಿರು­ವಾಗ ಯಾವುದೇ ಭತ್ಯೆಯಿಲ್ಲದೇ ಪ್ರತೀ ದಿನ ಧ್ವಜಾ­­ರೋಹಣ ಕೆಲಸ­ವನ್ನು ಅಪೇಕ್ಷಿಸುವುದು ಯಾವ ನ್ಯಾಯ? ಹಣದುಬ್ಬರದ ಕಾಲದಲ್ಲಿ ಕನಿಷ್ಠ ಗೌರವಧನ ತೆಗೆದುಕೊಂಡು ಕಚೇರಿ ಕೆಲಸಗಳನ್ನು ನಿರ್ವಹಿ­ಸುತ್ತಿರುವ ನೌಕರರಿಗೆ ಧ್ವಜಾ­ರೋಹಣಕ್ಕೆರೂ 30 ಭತ್ಯೆ ನೀಡುವುದು ಹೆಚ್ಚೇ­ನಲ್ಲ.

ಕಚೇರಿ ಕೆಲಸಕ್ಕೆ ಬೆಳಗಿನ ಹತ್ತು ಗಂಟೆ ಸುಮಾರಿಗೆ ಬರುವ ಅವರು ಧ್ವಜಾರೋಹಣ­ಕ್ಕಾಗಿ, ಅವ­ರೋಹಣ­­ಕ್ಕಾಗಿ ಎರಡು ಸಲ ಬಂದು ಹೋಗ­ಬೇಕಾದುದನ್ನು ಗಣನೆಗೆ ತೆಗೆದುಕೊಳ್ಳ­ಬೇಕು. ಇಲ್ಲಿ ಚಿಂತನಾರ್ಹ ದಿನಂಪತ್ರಿ ಧ್ವಜಾರೋಹಣ ಉಚಿತವೇ? ಎಂಬುದೇ ಹೊರತು ಭತ್ಯೆ ಕೊಡುವುದು ಅಲ್ಲ.
–ಆರ್‌.ಜಿ. ಬ್ಯಾಕೋಡ. ಆಲಮಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT