ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶೌಚಾಲಯ ಕಡ್ಡಾಯವಾಗಲಿ

ಕುಂದು ಕೊರತೆ
Last Updated 17 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನಗರದಲ್ಲಿರುವ ದರ್ಶಿನಿಗಳು ಮತ್ತು ಹೋಟೆಲ್‌ಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಆಕಸ್ಮಿಕವಾಗಿ ಆ ಕೆಲಸಗಾರರಿಗೆ ಬೆಂಕಿ ಅಥವಾ ಇತರೆ ಬಿಸಿ ಪದಾರ್ಥಗಳಿಂದ ಅಪಾಯವಾದರೆ ತುರ್ತು ಚಿಕಿತ್ಸೆಯ ವ್ಯವಸ್ಥೆಯೇ ಇಲ್ಲದೆ ಒದ್ದಾಡುವ ಪರಿಸ್ಥಿತಿ ಇದೆ.

ಈ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ಗಳಲ್ಲಿ ಕಟ್ಟುನಿಟ್ಟಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಬೇಕು. ಜತೆಗೆ ಹೋಟೆಲ್‌ಗಳಿಗೆ ಹೋಗುವ ನಾಗರಿಕರಲ್ಲಿ ಸಾಕಷ್ಟು ಜನರು ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಮುಂತಾದವುಗಳಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಹೋಟೆಲ್‌ಗಳಲ್ಲಿ ಶೌಚಾಲಯಗಳೂ ದೊರೆಯುವುದಿಲ್ಲ. ಇದರಿಂದಾಗಿಯೇ ಅನೇಕ ಹೋಟೆಲ್‌ಗಳ ಅಕ್ಕಪಕ್ಕ ಕಟ್ಟಡದ ಕಾಂಪೌಂಡ್‌ಗಳು ಮೂತ್ರ ವಿಸರ್ಜನೆಯ ಕೇಂದ್ರಗಳಾಗಿ ಪರಿವರ್ತನೆಯಾಗಿವೆ.

ಹೀಗಾಗಿ ನಗರದಲ್ಲಿರುವ ಪ್ರತಿಯೊಂದು ದರ್ಶಿನಿ ಮತ್ತು ಹೋಟೆಲ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಶೌಚಾಲಯಗಳನ್ನು ಹೊಂದುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಜತೆಗೆ ಹೋಟೆಲ್‌ಗಳಲ್ಲಿ ದೊರೆಯುವ ನೀರು ಶುದ್ಧ ಕುಡಿಯುವ ನೀರು ಹೌದೋ ಅಥವಾ ಅಲ್ಲವೋ ಎಂದು ಬಿಬಿಎಂಪಿ ಅಧಿಕಾರಿಗಳು ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT