ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿಷ್ಕಾರ ಅಮಾನವೀಯ

Last Updated 6 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ ತಾಲ್ಲೂಕಿನ ಗೊಲ್ಲರದೊಡ್ಡಿ­ಯಲ್ಲಿ ಅತ್ಯಾಚಾರಕ್ಕೆ ಒಳಗಾದ 17ರ ಹುಡು­ಗಿಯ ವ್ಯಥೆ ಓದಿ ಎದೆ ನಡುಗಿತು ­(ಪ್ರ.ವಾ.­, ಆ.2). ಅವಿವಾ­ಹಿತ ಹುಡುಗಿ ಮಗು ಹಡೆ­ದರೆ ಸೂತಕ ಎಂದು ಭಾವಿಸಿ ಮಗು ಮತ್ತು ಬಾಣಂತಿಯನ್ನು ಊರ ಹೊರಗೆ ‘ದೂಡಿದ್ದು’ ಅತ್ಯಂತ ಅಮಾನವೀಯ.

ಸೂತಕದ ಹೆಸರಲ್ಲಿ ಬಾಣಂತಿ ಮತ್ತು 11 ದಿನದ ಕೂಸನ್ನು ಊರಿನಿಂದ ಹೊರಗಟ್ಟಿ­ರು­ವುದು ಅಜ್ಞಾನದ ಪರಮಾವಧಿ.  ಬಾಣಂ­ತಿಯು 9 ತಿಂಗಳು ಮಗುವನ್ನು ಹೊತ್ತು ತನ್ನ ಶರೀರದ ಅರ್ಧಶಕ್ತಿಯನ್ನು ಧಾರೆ ಎರೆದು ಮಗುವನ್ನು ಹಡೆಯುತ್ತಾಳೆ. ಹಡೆದಾಗ ರಕ್ತ­ಸ್ರಾವ­ವಾಗಿ ಆಕೆ ನಿತ್ರಾಣಗೊಂಡಿರುತ್ತಾಳೆ. ಬೆನ್ನು­ಮೂಳೆ ದುರ್ಬ­ಲ­ವಾಗಿರುತ್ತದೆ. ಬೆನ್ನೆಲುಬು ಸರಿ­ಯಾ­ಗಲು ಮತ್ತು ಹಿಂದಿನ ಶಕ್ತಿಯನ್ನು ಮರಳಿ ಪಡೆ­ಯಲು ಕನಿಷ್ಠ 6 ತಿಂಗಳು ವಿಶ್ರಾಂತಿ ಬೇಕಾ­ಗುತ್ತದೆ. ಬಿಸಿ­ಯಾದ, ಶುಚಿ­ಯಾದ ಪೌಷ್ಟಿಕ ಆಹಾರ, ಬೆಚ್ಚನೆ ಉಡುಪು, ಕುಟುಂಬ­ದವ­ರಿಂದ ರಕ್ಷಣೆ, ಸಹ­ಕಾರ, ಬಾಣಂ­ತಿಗೆ ಅತ್ಯವಶ್ಯಕ. ಅಂತಹ ಸ್ಥಿತಿ­ಯಲ್ಲಿ  ಊರ-­ಹೊರಗೆ ಅಸುರಕ್ಷಿತ ವಾತಾವ­ರಣಕ್ಕೆ ದೂಡು­ವುದು ಸಂಪ್ರದಾಯ­ವಲ್ಲ, ಅದು ಮೌಢ್ಯ. ಈ ಗ್ರಾಮದ ಮುಖಂಡರು, ಪ್ರಜ್ಞಾವಂತರಾಗಬೇಕು. ಜನರಿಗೆ ತಿಳಿಹೇಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT