ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಹಗಲುದರೋಡೆ

ಕುಂದು ಕೊರತೆ
Last Updated 21 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಹೊಸ ವರ್ಷದ ಕೊಡುಗೆಯಾಗಿ ಜನವರಿಯಿಂದ (2016) ಬಿಎಂಟಿಸಿ ತನ್ನ ಕಪ್ಪು ಹಲಗೆ ಮಾಸಿಕ ಬಸ್‌ ಪಾಸ್‌ (₹825) ರದ್ದು ಪಡಿಸಿ ಎಲ್ಲರೂ 1,050 ರೂಪಾಯಿ ಮಾಸಿಕ ಪಾಸ್‌ ಕೊಳ್ಳಬೇಕು ಎಂದಿರುವುದು ನಗರದ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.

ಕೆ.ಎಸ್‌.ಆರ್‌.ಟಿ.ಸಿ ಬಸ್‌ ಪಾಸ್‌ ದರ (ಡಿಸೆಂಬರ್‌ 2015) ಕೂಡ ಏರಿದೆ. ಪ್ರತಿವರ್ಷ ಟಿಕೆಟ್‌ ದರ, ಬಸ್‌ಪಾಸ್‌ ದರ ಏರಿಕೆ ಮಾಡುವ ಸಾರಿಗೆ ಸಂಸ್ಥೆಯದ್ದು ಹಗಲುದರೋಡೆ. ನಾಗರಿಕರಲ್ಲಿ ಇದು ನಡುಕ ಮೂಡಿಸಿದೆ. ಸಾರಿಗೆ ಸಂಸ್ಥೆ ತನ್ನ ಅದಕ್ಷತೆ, ಅವ್ಯವಹಾರ, ಭ್ರಷ್ಟಾಚಾರ ಸರಿಪಡಿಸಿಕೊಳ್ಳದೆ ನಷ್ಟದ ಎಲ್ಲಾ ಹೊಣೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಅನ್ಯಾಯ.

ದರ ಏರಿಕೆಯಾದಂತೆ ಸೇವಾ ಸುವ್ಯವಸ್ಥೆ ದಕ್ಷತೆ, ಶಿಸ್ತು, ಆಡಳಿತ ಹಾಗೂ ಸಿಬ್ಬಂದಿ ವರ್ಗದಲ್ಲಿ ಹೆಚ್ಚಾಗಿದೆಯೇ? ಪೆಟ್ರೋಲ್‌, ಡಿಸೇಲ್‌ ದರ ಇಳಿಕೆಯಾದ ದಿನಗಳಲ್ಲೂ ನಷ್ಟದಲ್ಲಿದೆ ಏಕೆ? ಪ್ರತಿದಿನ ಪ್ರತಿ ಬಸ್‌ನ ಚೆಕಿಂಗ್‌ ಏಕಿಲ್ಲ? ಪಾಸ್‌ ಪ್ರಯಾಣಿಕರೆಂದರೆ ನಿರ್ವಾಹಕರು ಮುಖ ಸಿಂಡರಿಸಿಕೊಳ್ಳುತ್ತಾರೆ. ಹಾಗೆಯೇ ದೈನಂದಿನ ಪಾಸ್‌ನ ಗುರುತಿನ ಚೀಟಿ ಹೆಂಗಸರ/ ಗಂಡಸರ ಪಾಸ್‌ನ ಗೊಂದಲದಲ್ಲಿ ಕೆಲವು ಬಾರಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಸಾರಿಗೆ ಸಂಸ್ಥೆಯ ಅನ್ನದಾತ ಪ್ರಯಾಣಿಕರಿಗೆ ಪ್ರಯಾಣ ಕಿರಿಕಿರಿ ಏಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT