ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆಯಿಂದ ಜನ ತತ್ತರ

ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಮುಗಿದಿದೆ. ಈಗ  ಬೆಲೆ ಏರಿಕೆಯ ‘ಹಂಗಾಮ’ ಪ್ರಾರಂಭವಾಗಿದೆ.

ಮೊನ್ನೆ ವಿದ್ಯುತ್ ದರ ಒಂದು ಯೂನಿಟ್‌ಗೆ ೧೦ ರಿಂದ ೫೦ ಪೈಸೆ ಏರಿಕೆಯಾಗಿದೆ.  ಬಸ್ ದರ ಹೆಚ್ಚಳದ ಬಿಸಿ ಇನ್ನೂ ಆರಿಲ್ಲ. ಅಷ್ಟರಲ್ಲಾಗಲೇ ಡಿಸೇಲ್ ದರ ಲೀಟರ್‌ಗೆ ₨ ೧.೦೯ ರಷ್ಟು ತುಟ್ಟಿಯಾಗಿದೆ.

ಹೀಗೆ ಒಂದರ ಮೇಲೊಂದರಂತೆ ಬೆಲೆ ಏರಿಕೆ ಆಗುತ್ತಲೇ ಹೋದರೆ ಜನಸಾಮಾನ್ಯರ ಪಾಡೇನು?   ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದೆ ಯಾವ, ಯಾವ ವಸ್ತುಗಳ ಬೆಲೆಗಳು ಏರುತ್ತವೋ ಎಂದು ಜನರಲ್ಲಿ ಭಯ ಮೂಡಿದೆ. ದೈನಂದಿನ ಬದುಕು ಸಾಗಿಸಲಾಗದ ಸ್ಥಿತಿ ಎದುರಾಗಿದೆ.

ಸರ್ಕಾರ ಎಚ್ಚೆತ್ತುಕೊಂಡು ಈ ಬೆಲೆ ಏರಿಕೆಯ ದರ ಸಮರವನ್ನು ಇಷ್ಟಕ್ಕೇ ನಿಲ್ಲಿಸಬೇಕು. ಇಲ್ಲವಾದರೆ ಬೆಲೆ ಏರಿಕೆ ವಿರುದ್ಧದ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ಎದುರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಯಾವುದೋ ಒಂದು ರೂಪದಲ್ಲಿ ನಿಯಂತ್ರಣ ಸಾಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT