ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ವಿ.ವಿ.ಗಳು ಎಷ್ಟು ಪ್ರಾಮಾಣಿಕ?

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕೆಲವು ಉಪನ್ಯಾಸಕರು, ಸಿಂಡಿಕೇಟ್‌ ಸದಸ್ಯರು ವಿದ್ಯಾರ್ಥಿ­ಗಳಿಂದ ಹಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಸುತ್ತಿರುವ ಸುದ್ದಿಯನ್ನು ತಡ­ವಾಗಿಯಾದರೂ ಬೆಳಕಿಗೆ ತಂದಿರುವ ಪೊಲೀಸ್‌ ಅಧಿಕಾರಿ ರವಿಕಾಂತೇಗೌಡರು ಅಭಿನಂದ­ನಾರ್ಹರು.

ಹಾಗೆಂದು ಉಳಿದ ವಿ.ವಿ.ಗಳು ಸಾಚಾ ಅಲ್ಲ. ಕರ್ನಾಟಕದ ಭಾಗಶಃ ಎಲ್ಲ ವಿ.ವಿ.ಯ ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆ ಹದಗೆಟ್ಟುಹೋಗಿದೆ. ಪ್ರಸ್ತುತ ಇಂತಹ ಪೊಲೀಸ್‌ ತನಿಖಾ ದಾಳಿಯು ಅಗತ್ಯ ಮತ್ತು ಅನಿವಾರ್ಯ.

ಇತ್ತೀಚೆಗೆ ಜಾತಿ ಮತ್ತು ಹಣದ ಭ್ರಷ್ಟಾಚಾರದ ವಿಷವು ಹೆಡೆ ಎತ್ತಿ ಆಡು­ತ್ತಿರುವಾಗ ಕೆಲವು ಉಪನ್ಯಾಸಕರು ಬಿ.ಎ, ಬಿಕಾಂ, ಬಿಎಸ್‌ಸಿ ಮುಂತಾದ ಪದವಿ ಪರೀಕ್ಷೆ­ಯನ್ನು ಪಾಸ್‌ ಮಾಡಿಸಲು ಇಂತಿಷ್ಟು, ಹೆಚ್ಚು ಅಂಕ ಕೊಡಿಸಲು ಇಂತಿಷ್ಟು ಎಂದು ‘ದಂಧಾ’ ಮಾಡುತ್ತಿರುವರು. ಇವರ ‘ದಂಧಾ’ ಇದೊಂದೇ ಕೆಲಸಕ್ಕೆ ಸೀಮಿತವಲ್ಲ.

ಪರೀಕ್ಷೆ ನಡೆದಾಗ ಕೆಲವರು ತನಿಖಾ ದಳದ ಸದಸ್ಯರಾಗುತ್ತಾರೆ (ಕಾಲೇಜಿನಿಂದ ಹಣ ಎತ್ತಲು).  ಯಾವುದಾದರೂ ತಮಗೆ ಅನು­ಕೂಲ ಮಾಡುವ ಕಾಲೇಜಿಗೆ ಎಕ್ಸಟರ್ನಲ್‌  ಆಗಿ ಹೋಗುತ್ತಾರೆ. ತಮಗೆ ಬೇಕಾದವರನ್ನು ಪರೀಕ್ಷಾ ಮೌಲ್ಯಮಾಪನಕ್ಕೆ ಕರೆದೊಯ್ಯು­ತ್ತಾರೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಂದ ಹಣ ಪಡೆದು ಮರುಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಕೊಡಿಸುತ್ತಾರೆ.
ಹಾಗೆಂದು ವಿ.ವಿ.ಯ ಎಲ್ಲ ಉಪನ್ಯಾಸಕರು ಕೆಟ್ಟವರಲ್ಲ ಪಾಂಡವರು ಇದ್ದಾರೆ.
–ಜಗದೀಶ. ವೀ. ನೂಲಿನವರ
ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT