ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ರತ್ನಕ್ಕೆ ಅರಸು ಅರ್ಹರಲ್ಲವೇ?

Last Updated 19 ನವೆಂಬರ್ 2013, 19:30 IST
ಅಕ್ಷರ ಗಾತ್ರ

ನಿತೀಶ್‌ಕುಮಾರ್ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಅಟಲ್ ಬಿಹಾರಿ ವಾಜ­ಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು  ಹೇಳಿದ್ದಾರೆ. ಅದು ಅವರ ಮನದಾಳದ ಆಶ­ಯವೋ  ಅಥವಾ ತಾವು ಪಕ್ಷಾತೀತರೆಂದು ತೋರಿಸಿಕೊಳ್ಳುವ ಕಾತರವೋ, ಯು.ಪಿ.ಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ರಾಜಕಾರಣವೋ ಒಂದೂ ಅರ್ಥವಾಗುತ್ತಿಲ್ಲ.

ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಮರಣೋತ್ತರ­ವಾಗಿ ಭಾರತರತ್ನ ನೀಡಿದ ನಂತರ ಈ ಪುರಸ್ಕಾರಕ್ಕೆ ಘನತೆ ಹೆಚ್ಚಿದ್ದು ನಿಜ. ಅಂತೆಯೇ ಈ ರಾಷ್ಟ್ರದಲ್ಲಿ ಅಸಮಾನತೆಗಳನ್ನು ಅಳಿಸಲು ಪ್ರಯತ್ನಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ಲೋಹಿಯಾ, ಕಾನ್ಶಿರಾಂ­ರಂತಹ ಅನೇಕರಿಗೆ ಈ ಪುರಸ್ಕಾರ ದಕ್ಕಬೇಕಿದ್ದು ಈವರೆಗೆ ದಕ್ಕದೇ ಇದ್ದದ್ದಕ್ಕೆ ಕಾರಣಗಳನ್ನು ಹುಡುಕಬೇಕಿಲ್ಲವಷ್ಟೆ.

ಆದರೆ ಕಾಂಗ್ರೆಸ್‌ನವರೇ ಆಗಿದ್ದು ತನ್ನ ಒಡಲಲ್ಲಿ ಅಂಬೇಡ್ಕರ್, ಫುಲೆ, ಪೆರಿಯಾರ್‌ ಅವ­ರನ್ನು ಇಟ್ಟುಕೊಂಡು ಈ ನೆಲದ ಅಸಹಾಯಕ ವರ್ಗಗಳಿಗೆ ಧ್ವನಿ ನೀಡಿದ್ದು ದೇವರಾಜ ಅರಸು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳು­ತ್ತಾರೆ. ಅರಸು ಇಲ್ಲಿ ಹುಟ್ಟಿರದಿದ್ದರೆ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಪರಿಸ್ಥಿತಿ ಕಲ್ಪಿಸಿಕೊಳ್ಳಲಿಕ್ಕೂ ಕಷ್ಟವಾಗಿರುತ್ತಿತ್ತು.

ಸಿದ್ದರಾಮಯ್ಯನವರು ಮುಖ್ಯಮಂತ್ರಿ­ಯಾಗ­ಲಿಕ್ಕೂ ಅರಸರ ಕಾಣ್ಕೆ ಪ್ರತ್ಯಕ್ಷವಾಗೋ, ಪರೋಕ್ಷ­ವಾಗೋ ಇದ್ದೇ ಇದೆ. ಅವರು  ತಮ್ಮ ಸಚಿವ ಸಂಪುಟದಲ್ಲಿ  ಅರಸರಿಗೆ ಭಾರತರತ್ನ ನೀಡ­ಬೇಕೆಂಬ ನಿರ್ಣಯ ಅಂಗೀಕರಿಸಿ ಅವರದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟರೆ, ದಕ್ಕುವುದು ಅಸಾಧ್ಯವಾಗುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT