ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ತೀರ್ಪು

Last Updated 19 ಆಗಸ್ಟ್ 2015, 19:39 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಎಲ್ಲ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಹಾಗೂ ನ್ಯಾಯಾಂಗ ಸಿಬ್ಬಂದಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ (ಪ್ರ.ವಾ., ಆ. 19). ಇದು ಕಾಯ್ದೆ ರೂಪದಲ್ಲಿ ನಮ್ಮ ರಾಜ್ಯದಲ್ಲಿಯೂ ಅವಶ್ಯವಾಗಿ ಜಾರಿಗೆ ಬರಬೇಕಾಗಿದೆ.

ಇಂತಹ ಕ್ರಮ ಸಾಮಾಜಿಕ ಸಮಾನತೆಯನ್ನು ಎತ್ತಿಹಿಡಿಯಬಲ್ಲದು. ಖಾಸಗಿ ಶಾಲೆಗಳ ಸಮೂಹ ಸನ್ನಿಗೆ ಒಳಗಾಗಿರುವ ಜನ ಒಂದೆಡೆ ಹಗಲು ದರೋಡೆಗೆ ಒಳಗಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಯಲ್ಲಿವೆ. ಜನ ಸರ್ಕಾರಿ ಉದ್ಯೋಗ, ಗ್ಯಾಸ್, ವಿದ್ಯುತ್, ನೀರು ಮೊದಲಾದ ಸರ್ಕಾರಿ ಸವಲತ್ತುಗಳು ಬೇಕೆಂದು ಬಯಸುತ್ತಾರೆ.

ಆದರೆ ಇವರಿಗೆ ಸರ್ಕಾರಿ ಶಾಲೆ ಮಾತ್ರ ಯಾಕೆ ಬೇಡ?
ಇಂದು ನಮ್ಮ ಸರ್ಕಾರಿ ಶಾಲೆಗಳಲ್ಲಿ ಕೆಲವು ಮೂಲಭೂತ ಅವಶ್ಯಕತೆಗಳ ಕೊರತೆಯನ್ನು ಹೊರತುಪಡಿಸಿದರೆ, ಪ್ರತಿಭಾವಂತ ಬೋಧಕರಿಗೇನೂ ಕೊರತೆ ಇಲ್ಲ ಎಂಬುದನ್ನು ನಾನೊಬ್ಬ ಶಿಕ್ಷಕನಾಗಿ ಕಂಡುಕೊಂಡಿದ್ದೇನೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರಾದಿಯಾಗಿ ಸರ್ಕಾರಿ ನೌಕರರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುವಂತಾದರೆ, ಸರ್ಕಾರಿ ಶಾಲೆಗಳು ಬೆಳಗಾಗುವುದರೊಳಗೆ ಖಾಸಗಿ ಶಾಲೆಗಳನ್ನು ಸರ್ವ ರೀತಿಯಲ್ಲಿಯೂ ಹಿಂದಿಕ್ಕುವುದರಲ್ಲಿ ಅನುಮಾನವಿಲ್ಲ. ಆದರೆ, ಯಾವುದೇ ಲಾಬಿಗೆ ಮಣಿಯದೆ ಕಾಯ್ದೆ ರೂಪಿಸುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕೆ ಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT