ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಬಸ್ಸುಗಳ ಸೌಲಭ್ಯ ಕಲ್ಪಿಸಿ

ಕುಂದು ಕೊರತೆ
Last Updated 10 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಲಗ್ಗೆರೆ ಸೇರಿದಂತೆ ಹತ್ತು ಹೊಸ ಬಡಾವಣೆಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿವೆ. ಆದರೆ ದುರದೃಷ್ಟಕರ ಸಂಗತಿಯೆಂದರೆ ಲಗ್ಗೆರೆಯ ಡಾ. ವಿಷ್ಣುವರ್ಧನ್‌ ಮುಖ್ಯರಸ್ತೆ 300 ಅಡಿಗಳಷ್ಟು ಮಾತ್ರ ಕಿರಿದಾಗಿದೆ. ಈ ಕಿರಿದಾದ ಮುಖ್ಯರಸ್ತೆಯಲ್ಲಿ ಲಗ್ಗೆರೆ ನೂತನ ಬಿಎಂಟಿಸಿ ಬಸ್ಸು ನಿಲ್ದಾಣಕ್ಕೆ ಬಿಎಂಟಿಸಿ ಮೂರು ಮಾರ್ಗಗಳ ಬಸ್ಸುಗಳು ಸೇರಿದಂತೆ ಅಟಲ್‌ ವಾಜಪೇಯಿ ಬಸ್ಸು ಸಹ ಬಂದು ಹೋಗಲು ತುಂಬಾ ತೊಂದರೆಯಾಗಿದೆ. ಲಗ್ಗೆರೆಯ ಡಾ. ವಿಷ್ಣುವರ್ಧನ್‌ ರಸ್ತೆಯಲ್ಲಿ ಬಿಎಂಟಿಸಿ ಬಸ್ಸುಗಳು ಸುಲಭವಾಗಿ ಬಂದು ಹೋಗಲು ಕಿರಿದಾದ ಈ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಲು ಸುಮಾರು 12–13 ವರ್ಷಗಳಿಂದಲೂ ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ.

ಕಿರಿದಾದ ಮುಖ್ಯ ರಸ್ತೆಯ ಕಾರಣದಿಂದ ಬಿಎಂಟಿಸಿ ಬಸ್ಸುಗಳು ಸರಿಯಾದ ಸಮಯಕ್ಕೆ ಲಗ್ಗೆರೆ ಬಸ್ಸು ನಿಲ್ದಾಣಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ನಾಗರಿಕರು ವಿಧಿಯಿಲ್ಲದೆ ಲಗ್ಗೆರೆಯಿಂದ ಜಾಲಹಳ್ಳಿ ಕ್ರಾಸ್‌ಗೆ ಬಂದು ಅಲ್ಲಿಂದ ಮೆಜೆಸ್ಟಿಕ್‌, ಶಿವಾಜಿನಗರ, ಸಿಟಿ ಮಾರ್ಕೆಟ್‌ ಮಾರ್ಗದ ಬಸ್ಸುಗಳಿಗೆ ಹೋಗಬೇಕಾಗಿದೆ. ಇದರಿಂದ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಸರಿಯಾದ ಸಮಯಕ್ಕೆ ಕೆಲಸ ಕಾರ್ಯಗಳಿಗೆ ಹೋಗಲು ತೊಂದರೆಯಾಗಿದೆ.

ಈಗಲಾದರೂ ಸಂಬಂಧಪಟ್ಟ ಬಿಎಂಟಿಸಿ ಹಿರಿಯ ಅಧಿಕಾರಿಗಳು ಗಮನ ಹರಿಸಿ, ರಿಂಗ್‌ ರೋಡ್‌ ಮಾದರಿಯಲ್ಲಿ ಜಾಲಹಳ್ಳಿ ಕ್ರಾಸ್‌ನಿಂದ ಚೌಡೇಶ್ವರಿನಗರ ಬಸ್ಸು ನಿಲ್ದಾಣದವರೆಗೆ 2–4 ಮಿನಿ ಬಸ್ಸುಗಳ ಓಡಾಟವನ್ನು ಕಲ್ಪಿಸಿಕೊಟ್ಟು ನಾಗರಿಕರ ತೊಂದರೆಯನ್ನು ತಪ್ಪಿಸುತ್ತಾರೆಂದು ಆಶಿಸೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT