ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಿ ಎಂದು?

ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಬಿಕ್ಕಟ್ಟಿನಿಂದ ಇನ್ನೂ ಮುಕ್ತಗೊಂಡಂತಿಲ್ಲ. ಯುಜಿಸಿಯಿಂದ ಆಕ್ಷೇಪಕ್ಕೆ ಒಳಗಾಗಿರುವ ಈ ವಿಶ್ವವಿದ್ಯಾಲಯಕ್ಕೆ 2015– 16ನೇ ಸಾಲಿನ ಪ್ರವೇಶಕ್ಕಾಗಿ ಈವರೆಗೆ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂಬ ಕುಲಪತಿಯವರ ಭರವಸೆ ನಿಜವಾಗಿಲ್ಲ.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದ್ದ ಮುಕ್ತ  ವಿಶ್ವವಿದ್ಯಾಲಯ ಹೀಗೆ ತ್ರಿಶಂಕು ಸ್ಥಿತಿ ಅನುಭವಿಸುತ್ತಿರುವುದು ಸ್ವಯಂಕೃತ ಅಪರಾಧವೇ ಇರಬಹುದು. ಆದರೆ ಇದಕ್ಕೆ ಪರಿಹಾರ ಇಲ್ಲವೇ? ದೇಶದಲ್ಲಿ ಎಷ್ಟೊಂದು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ನೀತಿ, ನಿಯಮಗಳನ್ನು ಗಾಳಿಗೆ ತೂರಿ ಬಳಿಕ ಸಕ್ರಮ ಪ್ರಕ್ರಿಯೆಯಲ್ಲಿ ಪಾರಾಗಿ ಬಂದಿಲ್ಲವೇ? ಇದು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಯಾದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಹಂತದಲ್ಲಿಯೂ ಅಗತ್ಯ ಕ್ರಮವನ್ನು ರಾಜ್ಯದ ಜನ ಬಯಸುತ್ತಾರೆ.

ತರಗತಿ ಶಿಕ್ಷಣವನ್ನು ಅನಿವಾರ್ಯವಾಗಿ ಅರ್ಧದಲ್ಲಿ ಮೊಟಕುಗೊಳಿಸಿದವರಿಗೆ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ನೆರವಾಗುತ್ತಿರುವ ಮುಕ್ತ  ವಿಶ್ವವಿದ್ಯಾಲಯ ಮತ್ತೆ ತನ್ನ ಹಿರಿಮೆಯನ್ನು ಗಳಿಸುವಂತಾಗಬೇಕು. ಇದಕ್ಕಾಗಿ ಸಂಬಂಧಪಟ್ಟವರೆಲ್ಲ ಕೈ ಜೋಡಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT