ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲೇ ಸೂಚಿಸಿ

Last Updated 12 ಮೇ 2015, 19:30 IST
ಅಕ್ಷರ ಗಾತ್ರ

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಪ್ರತಿವರ್ಷ ನೂತನ ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪ್ರಯಾಣಿಕರು ಸುಖಕರ  ಪ್ರಯಾಣಕ್ಕೆ ರೈಲ್ವೆಯನ್ನು ಅವಲಂಬಿಸಿದ್ದಾರೆ. ಆದರೆ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪ್ರಯಾಣಿಸುವವರಿಗೆ,  ಅದೂ ರಾತ್ರಿ ವೇಳೆ ರೈಲು ನಿಲುಗಡೆಯಾದ ಅಥವಾ ಮುಂದೆ ಬರುವ ನಿಲ್ದಾಣದ ಮಾಹಿತಿ ಸಿಗುವುದಿಲ್ಲ.

ಮುಂದಿನ ನಿಲ್ದಾಣದ ಮಾಹಿತಿ ಮೊದಲೇ ಲಭಿಸಿದರೆ ಸಾಮಾನು ಸರಂಜಾಮುಗಳನ್ನು ಅಣಿಗೊಳಿಸಿಕೊಂಡು ಶೀಘ್ರ ಇಳಿಯಲು ಸಹಾಯವಾಗುತ್ತದೆ. ಅದರಲ್ಲಿಯೂ ವೃದ್ಧರಿಗೆ, ಹೆಣ್ಣು ಮಕ್ಕಳಿಗೆ, ಚಿಕ್ಕ ಮಕ್ಕಳಿಗೆ, ಅಂಗವಿಕಲರಿಗೆ ತಾವು ಇಳಿಯಬೇಕಾದ ನಿಲ್ದಾಣದ ಬಗ್ಗೆ ತುಸು ಮೊದಲೇ ಸೂಚನೆ ದೊರೆತರೆ ಹೆಚ್ಚು ಅನುಕೂಲವಾಗುತ್ತದೆ. ಆದಕಾರಣ ಯಾವುದೇ ನಿಲ್ದಾಣ ಸಮೀಪಿಸಿದಾಗ ಅದರ ಹೆಸರನ್ನು ಆಯಾ ರಾಜ್ಯ ಭಾಷೆ ಜತೆಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ‘ಡಿಸ್‌ಪ್ಲೇ’ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಮಾಹಿತಿಯನ್ನು ಧ್ವನಿವರ್ಧಕ ಮೂಲಕವೂ ಪ್ರಕಟಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT