ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ– ಸಜೆ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವೈವಿಧ್ಯಕ್ಕೆ ಹೆಸರಾದ ಭಾರತದಲ್ಲಿ ಹಬ್ಬಗಳು ನಮ್ಮ ಬದುಕಿನಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ರೀತಿಯ ಹಬ್ಬ ಹರಿದಿನಗಳು ಕುಟುಂಬಸ್ಥರು, ನೆಂಟರಿಷ್ಟರು ಒಂದೆಡೆ ಸೇರಿಯೋ, ಸಾರ್ವಜನಿಕವಾಗಿಯೋ ಆಚರಿಸಿ ಸಾಮರಸ್ಯ ಹೆಚ್ಚಿಸಲೂ ಸಹಾಯಕ. ಹೂವು ಹಣ್ಣು ಬೆಳೆಯುವವರ ಹಾಗೂ ವ್ಯಾಪಾರಸ್ಥರ ದುಡಿಮೆಗೂ ಅವಕಾಶ.

ಅದರ ಜೊತೆ ಸಾಲುಗಟ್ಟಿ ರಜೆಗಳು ಬಂದಲ್ಲಿ ಪ್ರವಾಸಿತಾಣಗಳನ್ನು ನೋಡಲು ಅವಕಾಶವಾಗುತ್ತದೆ. ವಿದ್ಯಾರ್ಥಿಗಳಿಗೆ ಇದರಿಂದ ಜ್ಞಾನಾರ್ಜನೆ ಆಗುತ್ತದೆ. ಆದಕಾರಣ  ಶಿಕ್ಷಣದ ಭಾಗವೆಂದೇ ಪರಿಗಣಿಸಬಹುದು. ಆದರೆ ಹಬ್ಬದ ಸವಿ ಅನುಭವಿಸಲು ಸಾಧ್ಯವಾಗದ ರೀತಿ ಅನೇಕ ಶಿಕ್ಷಣ ಸಂಸ್ಥೆಗಳು ಟೆಸ್ಟ್‌, ಪರೀಕ್ಷೆಗಳನ್ನು ಹಮ್ಮಿಕೊಳ್ಳುತ್ತಿವೆ. 

ರಜೆ ಮುಗಿದ ಕೂಡಲೇ  ಪರೀಕ್ಷೆಗಳನ್ನು, ಕ್ಲಾಸ್ ಟೆಸ್ಟ್‌ಗಳನ್ನು ನಡೆಸುತ್ತಿವೆ. ಇದರಿಂದ  ಪೋಷಕರಿಗೂ ಸಜೆ ಎಂಬಂತಾಗಿದೆ.

ಅಂಬೆಗಾಲು ಬಿಟ್ಟೇಳುತ್ತಿದ್ದಂತೆ ಶಾಲೆಗೆ ಹೋಗುವ ಈಗಿನ ಶಿಕ್ಷಣದ ಹೊರೆಯಲ್ಲಿ  ಒಂದೆರಡು ರಜೆಗಳಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಪೋಷಕರು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಈ ಸಜೆಯಿಂದ ಮುಕ್ತಿ ದೊರಕಿಸಿಕೊಡಲು ಸರ್ಕಾರ ಕ್ರಮ ಜರುಗಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT