ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರ ವಾಪಸಾಗಲಿ

Last Updated 28 ಅಕ್ಟೋಬರ್ 2015, 19:36 IST
ಅಕ್ಷರ ಗಾತ್ರ

ಜರ್ಮನಿ ತನ್ನಲ್ಲಿರುವ ಹಿಂದೂ ದೇವರ ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಹಿಂತಿರುಗಿಸಲು ಉತ್ಸುಕತೆ ತೋರಿದೆ. ಆಸ್ಟ್ರೇಲಿಯಾ ಪ್ರಧಾನಿಯವರು, ಭಾರತದ್ದೆನ್ನಲಾದ ಚೋಳರ ಕಾಲದ ಹಿಂದೂ ದೇವರ ಮೂರ್ತಿಗಳನ್ನು ಭಾರತಕ್ಕೆ ಹಿಂತಿರುಗಿಸಿದ್ದಾರೆ ಹಾಗೂ ಕ್ಯಾನ್‌ಬೆರಾದ ಕಲಾ ಗ್ಯಾಲರಿಯಲ್ಲಿರುವ 2,000 ವರ್ಷ ಹಳೆಯದಾದ, ಬುದ್ಧನ ಕುಳಿತ ಭಂಗಿಯ ಶಿಲ್ಪಗಳನ್ನು ಹಿಂತಿರುಗಿಸುವ ಭರವಸೆಯನ್ನು ನೀಡಿದ್ದಾರೆ.

ಆದರೆ ವಸಾಹತು ಕಾಲದಲ್ಲಿ ಭಾರತದಿಂದ ಸಾಗಿಸಲಾದ ಅಮೂಲ್ಯ ಕೊಹಿನೂರು ವಜ್ರವನ್ನು ಬ್ರಿಟಿಷ್‌ ಸರ್ಕಾರ ಇನ್ನೂ ತನ್ನ ವಶದಲ್ಲಿರಿಸಿಕೊಂಡಿದೆ. ವಿಶ್ವದ ಬದಲಾದ ರಾಜಕೀಯ ಸನ್ನಿವೇಶಗಳಿಗೆ ಅನುಗುಣವಾಗಿ, ಸ್ನೇಹ, ಸಾಮರಸ್ಯದ ದ್ಯೋತಕವಾಗಿ ಬ್ರಿಟನ್‌ ಈ ಅಪೂರ್ವ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ ನೈತಿಕತೆ ಮೆರೆಯಬೇಕಾಗಿದೆ. ನ್ಯಾಯಪರತೆಯನ್ನು ಪ್ರದರ್ಶಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ ತಾಂತ್ರಿಕ ಪ್ರಯತ್ನಗಳು ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT