ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌: ರಿಯಾಯ್ತಿ ಮೊತ್ತವೂ ಹೆಚ್ಚಿಸಲಿ

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಮೇ ಒಂದರಿಂದ  ಅನ್ವಯವಾಗುವಂತೆ ವಿದ್ಯುತ್‌ ದರಗಳನ್ನೇನೋ ಏರಿಸಿದೆ. ಆದರೆ ತಾನು ಗ್ರಾಹಕರಿಗೆ ಕೊಡುವ ರಿಯಾಯಿತಿ ಮೊತ್ತವನ್ನು ಹೆಚ್ಚು ಮಾಡುವ ಬಗ್ಗೆ ಚಕಾರವೆತ್ತದೆ ಮೌನ ವಹಿಸಿದೆ.

ಉದಾಹರಣೆಗೆ ಅನೇಕ ಗ್ರಾಹಕರು ಸಾವಿರಾರು ರೂಪಾಯಿ ವ್ಯಯಿಸಿ ಬಿಸಿನೀರು ಪಡೆಯಲು ಸೋಲಾರ್‌ ಹೀಟರ್‌ಗಳನ್ನು ಅಳವಡಿಸಿಕೊಂಡಿದ್ದು, ಅವರಿಗೆ ಮೊದಲಿನಿಂದಲೂ ಮಾಸಿಕ ವಿದ್ಯುತ್‌ ಬಿಲ್ಲಿನಲ್ಲಿ ಪ್ರತಿ ಯೂನಿಟ್‌ಗೆ ಕೇವಲ 50 ಪೈಸೆ­ಯಂತೆ ಗರಿಷ್ಠ ₨ 50  ರಿಯಾಯಿತಿ ಕೊಡಲಾಗು­ತ್ತಿದೆ.

ಹಣದುಬ್ಬರದ ಇಂದಿನ ದಿನಗಳಲ್ಲಿ ಕನಿಷ್ಠ ಪ್ರಮಾಣದ ಈ ರಿಯಾಯಿತಿ ಏನೂ ಅಲ್ಲ.
ನಾನಾ ಸಬೂಬು ಹೇಳಿ ಆಗಾಗ ದರ ಹೆಚ್ಚಿಸುವ ವಿದ್ಯುತ್‌ ಮಂಡಳಿಯು ತನ್ನ ಗ್ರಾಹಕರಿಗೆ ಕೊಡುವ ರಿಯಾಯಿತಿ ಮೊತ್ತವನ್ನು ಹೆಚ್ಚಿಸುವಲ್ಲಿಯೂ ಧಾರಾಳತನ ತೋರಲಿ.
–ಆರ್‌.ಜಿ. ಬ್ಯಾಕೋಡ, ವಿಜಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT