ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಶುಲ್ಕ ನಿರ್ಧಾರ: ಸಭೆ ಅಸಮರ್ಪಕ

Last Updated 27 ಮೇ 2013, 19:59 IST
ಅಕ್ಷರ ಗಾತ್ರ

ನ್ಯಾಯಾಲಯದ ನಿರ್ದೇಶನದಂತೆ ಶಿಕ್ಷಣ ಇಲಾಖೆ ಈ ತಿಂಗಳು ನಡೆಸಿದ್ದ ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಶುಲ್ಕ ನಿರ್ಧಾರ ವಿಚಾರ ಸಂಕಿರಣ ಸಮಗ್ರ ಸ್ವರೂಪದ್ದಾಗಿರಲಿಲ್ಲ.

ಅಂದು ಕೆಲವರು ಸಭೆ ಬಹಿಷ್ಕರಿಸಲು ಕಾರಣ: ರಾಜ್ಯಮಟ್ಟದ ಸಭೆಯಲ್ಲಿ  ಬೆಂಗಳೂರು ಮತ್ತು ಮಂಡ್ಯದ ಕೆಲವರನ್ನು ಬಿಟ್ಟರೆ ರಾಜ್ಯದ ಇತರೆಡೆ ಗಳಿಂದ ಪ್ರಾತಿನಿಧ್ಯ ಇರಲಿಲ್ಲ; ಇಲಾಖೆಯ ನಿವೃತ್ತ ಅಧಿಕಾರಿಗಳು, ಹಾಲಿ ಅಧಿಕಾರಿಗಳು, ಕೆಲ ಸರ್ಕಾರಿ ಶಾಲೆಗಳ ಶಿಕ್ಷಕರು, ಕೆಲವು ಅನುದಾನ ರಹಿತ ಶಾಲೆಗಳು ಮತ್ತು ಬೆರೆಳೆಣಿಕೆಯಷ್ಟು ಸ್ವಯಂಸೇವಾ ಸಂಘಗಳ ಪ್ರತಿನಿಧಿಗಳನ್ನು ಬಿಟ್ಟರೆ ಉಳಿದವರಿರಲಿಲ್ಲ.

ಶಾಲಾ ಮಕ್ಕಳ ಪೋಷಕರ ಸಂಘದವರು, ಅನುದಾನರಹಿತ ಶಾಲೆಗಳ ಶಿಕ್ಷಕರ ಸಂಘದ ಪ್ರತಿ ನಿಧಿಗಳು ಕೆಲವರು ಮಾತ್ರ ಬಂದಿದ್ದರು.
ವಿಚಾರ ಸಂಕಿರಣದಲ್ಲಿ ಪರ-ವಿರೋಧ ವಾದಗಳು ವಾಸ್ತವ. ಆದರೆ, ಈ ವಿಚಾರ ಸಂಕಿರಣದ ವಿನ್ಯಾಸದಲ್ಲಿ ಅಂತಹದ್ದಿರಲಿಲ್ಲ. ಒಂದೇ ದೃಷ್ಟಿಕೋನದತ್ತ ಎಲ್ಲರನ್ನೂ ಎಳೆದೊಯ್ಯುವಂತೆ, ಬಂದವರನ್ನೆಲ್ಲಾ ಮೊದಲೇ ಸಿದ್ಧಮಾಡಿದ್ದ ಗುಂಪುಗಳಿಗೆ ಸೇರಿಸಿ ತರಾತುರಿಯಲ್ಲಿ ಅಭಿಪ್ರಾಯ ಗಳನ್ನು ನೀಡಲು ಸೂಚಿಸಲಾಗಿತ್ತು.

ಇಂತಹ ತೋರಿಕೆಯ ವಿಚಾರ ಸಂಕಿರಣದಿಂದ ವ್ಯಕ್ತವಾಗುವ ಸಲಹೆಯನ್ನು ನ್ಯಾಯಾಲಯಕ್ಕೆ ನೀಡುವ ಬದಲು, ವೈಜ್ಞಾನಿಕವಾದ ಅಧ್ಯಯನ, ಚರ್ಚೆ, ಮಾಹಿತಿ ವಿಶ್ಲೇಷಣೆ ನಡೆಸಿ, ರಾಜ್ಯದ ಇತರರ ಅಭಿಪ್ರಾಯ ತೆಗೆದುಕೊಂಡು, ಪೋಷಕರಿಂದಲೂ ವಾಸ್ತವಾಂಶಗಳನ್ನು ಸಂಗ್ರಹಿಸಿ ತಿಳಿಸಬೇಕೆಂಬ ಕೋರಿಕೆಗೆ ಮನ್ನಣೆ ಸಿಗದ ಕಾರಣ ವಿಚಾರಸಂಕಿರಣದಿಂದ ನಾವು ಹೊರ ನಡೆದೆವು. ಇದನ್ನು ನ್ಯಾಯಾಲಯದ ಎದುರು ತರಲು ನಾವು ನಿರ್ಧರಿಸಿದ್ದೇವೆ.
  -ವಾಸುದೇವ ಶರ್ಮಾ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT