ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಲ್ಪ ಮಾಡೋಣ

Last Updated 30 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಹಾನಿಕರವಾದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದು ಸಂತೋಷದಾಯಕ. ಮನೆಯ ಮುಂದು ಹಿಂದು ಬರಿಯ ತೆಳು ಪ್ಲಾಸ್ಟಿಕ್‌ ಕೈಚೀಲಗಳದ್ದೇ ದರ್ಬಾರು. ಗಾಳಿಯಲ್ಲಿ ತೇಲಿ, ಹಾರಾಡಿ ಅಂತಿಮವಾಗಿ ಚರಂಡಿಯನ್ನೇ ಉಗ್ರಾಣವಾಗಿ ಮಾಡಿಕೊಂಡ ಈ ಪಿಡುಗನ್ನು ಇನ್ನಾದರೂ ಹೊಡೆದೋಡಿಸಲು ನಾವೆಲ್ಲರೂ ಒಮ್ಮತದ ನಿರ್ಧಾರ ಮಾಡೋಣ.

ಈ ಪ್ಲಾಸ್ಟಿಕ್‌ ನಿಷೇಧ ನಿರ್ಧಾರ ಬರೀ ಕಾಗದದ ಆದೇಶವಾಗಿ ಉಳಿಯಲು ಬಿಡಬಾರದು. ಪ್ಲಾಸ್ಟಿಕ್‌ಗೆ ಪರ್ಯಾಯ ಕಂಡುಕೊಳ್ಳೋಣ. ಬಟ್ಟೆಯ ಕೈಚೀಲಗಳನ್ನೇ ಬಳಸಲು ದೃಢ ಸಂಕಲ್ಪ ಮಾಡೋಣ. ‘ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕೆ ಬೇಕಿಲ್ಲ ಯಾರ ಆಜ್ಞೆ. ಮರ ಗಿಡ ಬೆಳೆಸಿ ಪರಿಸರ ಉಳಿಸಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT