ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮ ಇರಲಿ

Last Updated 8 ಸೆಪ್ಟೆಂಬರ್ 2015, 19:58 IST
ಅಕ್ಷರ ಗಾತ್ರ

ಶಾಲೆ ಎಂಬುದು ಮಕ್ಕಳ ಕನಸುಗಳನ್ನು ಚಿಗುರಿಸುವ, ಅವು ಸಾಕಾರಗೊಳ್ಳಲು ಅಡಿಪಾಯವಾಗುವ ಮಾರ್ಗದರ್ಶಕನಂತೆ. ಆದರೆ, ಇಂದು ಕೆಲವು ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ತಾರತಮ್ಯ ಶಾಲೆಯ ಬಗೆಗಿನ ನಮ್ಮ ನಿಲುವನ್ನೇ ಬದಲಿಸುವಂತಿದೆ.

ಸಾಮಾಜಿಕ ವ್ಯವಸ್ಥೆಯಲ್ಲಿದ್ದ ತಾರತಮ್ಯದ ರೋಗ ಇಂದು ಪ್ರತಿಷ್ಠೆಯ ಹೆಸರಿನಲ್ಲಿ ಶಾಲೆಗಳಿಗೂ ಅಂಟಿದೆ. ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಘಟನೆಗಳು ವರದಿಯಾಗುತ್ತಿರುವುದನ್ನು ಗಮನಿಸಿದರೆ, ಕೆಲವು ಶಿಕ್ಷಕರ ಮನಸ್ಥಿತಿಯ ಕ್ರೂರ ರೂಪ ನಮ್ಮನ್ನು ತಲ್ಲಣಗೊಳಿಸುತ್ತದೆ. ಎಲ್ಲರೂ ಸಮಾನವಾಗಿರಬೇಕು, ಶಿಸ್ತು ಎಂಬುದು ಮಕ್ಕಳಲ್ಲಿರಬೇಕು, ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಶಿಕ್ಷಕರು ಬಯಸುವುದು ತಪ್ಪಲ್ಲ. ಆದರೆ, ಅದನ್ನೇ ಮುಂದಿಟ್ಟುಕೊಂಡು ಮಕ್ಕಳ ಮನಸ್ಸನ್ನು ಗಾಸಿಗೊಳಿಸುವುದು ಎಷ್ಟು ಸರಿ?

ತಲೆಕೂದಲು ಕತ್ತರಿಸುವುದು, ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸುವುದು, ಹೋಂವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ಮನಬಂದಂತೆ ಥಳಿಸುವಂಥ ಘಟನೆಗಳು ನಡೆಯುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಇಂಥ ಘಟನೆಗಳು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಊಹಿಸಲೂ ಅಸಾಧ್ಯ. ಮಕ್ಕಳ ಮನಸ್ಸು ಹೂವಿನ ಹಾಗೆ. ಆ ಹೂವನ್ನು ಅರಳಿಸಬೇಕೆ ವಿನಾ ಮುದುಡಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT