ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಜನಪಕ್ಷಪಾತಿಯಲ್ಲ

Last Updated 12 ಜೂನ್ 2016, 19:30 IST
ಅಕ್ಷರ ಗಾತ್ರ

ವಿಮರ್ಶಕ ಪ್ರೊ. ಜಿ.ಎಚ್.ನಾಯಕ ಅವರು ದೇವರಾಜ ಅರಸು ಅವರ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ (ಪ್ರ.ವಾ., ಜೂನ್ 11).
‘ಅರಸರು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ್ದಾರೆ. ಅವರು ಸಂಪನ್ನ ಶ್ರೇಷ್ಠರಲ್ಲ. ಸ್ವಜನಪಕ್ಷಪಾತದಲ್ಲೂ ಸಿದ್ಧಹಸ್ತರಾಗಿದ್ದರು’ ಎಂದಿದ್ದಾರೆ.

ಮುಖ್ಯಮಂತ್ರಿಯಾದವರು ಹತ್ತು ತಲೆಮಾರು ಕೂತು ತಿನ್ನುವಂತೆ ಆಸ್ತಿಪಾಸ್ತಿ, ಹಣ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅರಸು ಭ್ರಷ್ಟಾಚಾರ ಮಾಡಿ ಯಾರಿಗೆ ಕೊಟ್ಟರು? ಅವರ ಮಕ್ಕಳು ದಿಕ್ಕಾಪಾಲಾದ ಕಣ್ಣ ಮುಂದಿನ ಸತ್ಯವನ್ನು ಒಮ್ಮೆ ನೋಡಿ.

ಸದಾಶಿವನಗರದ ಬೃಹತ್ ಬಂಗಲೆಗಳ ನಡುವೆ ಪಾಳುಬಿದ್ದ, ಅರಸರು ಜೀವಿಸಿದ್ದ ಮನೆಯೂ ಇಂದು ಇಲ್ಲದಂತಾಗಿದೆ. ಅವರ ಕಾಲದ ಭ್ರಷ್ಟಾಚಾರದ ಒಂದೆರಡು ಹಗರಣಗಳನ್ನಾದರೂ ಹೇಳಲಿ.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟ ಅರಸು ತಮ್ಮ ಜಾತಿಯನ್ನೇ ಆ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಕಡೆಗೆ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸಿನ ಅನ್ವಯ ಸರ್ಕಾರವು ಅರಸು ಸಮುದಾಯವನ್ನು II(ಎ) ಪಟ್ಟಿಗೆ ಸೇರಿಸಿದೆ.

ಹೀಗಿರುವಾಗ ಅರಸರು ಹೇಗೆ ಸ್ವಜನಪಕ್ಷಪಾತಿಯಾಗುತ್ತಾರೆ? ‘ಅರಸು ಸಂಪನ್ನ ಶ್ರೇಷ್ಠರೆಂದು ನಾನಂತೂ ಪ್ರಮಾಣಪತ್ರ ನೀಡಲಾರೆ’ ಎಂದಿರುವ ನಾಯಕರ ಮಾತು ಆತ್ಮರತಿಯಂತಿದೆ. ಅವರಿಗೆ ಪ್ರಮಾಣಪತ್ರ ಕೊಡುವವರು ಎಲ್ಲೋ ಕಾಡುಮೇಡುಗಳಲ್ಲಿ, ಹಟ್ಟಿಹಾಡಿಗಳಲ್ಲಿ, ಗಲ್ಲಿ ಗಟಾರಗಳಲ್ಲಿದ್ದಾರೆ. ಅರಸು ಅವರಿಗೆ ನಾಯಕರಂತಹವರ ಪ್ರಮಾಣಪತ್ರದ ಅವಶ್ಯಕತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT