ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಸುಧಾರಣೆ ಕ್ರಮ ಶ್ಲಾಘನೀಯ

Last Updated 2 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಮುಂಭಾಗದ ರಥ ಬೀದಿಯ ಅಕ್ಕ ಪಕ್ಕದಲ್ಲಿರುವ ಹಳೆಯ ಮಂಟಪಗಳಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಎಲ್ಲ ಮನೆಗಳನ್ನು ತೆರವುಗೊಳಿಸಿ ಅಲ್ಲಿ ವಾಸಿಸುತ್ತಿದ್ದವರಿಗೆ ಬೇರೆ ಕಡೆ ಆಶ್ರಯ ನೀಡಿರುವುದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಅತ್ಯಂತ ಸ್ತುತ್ಯಾರ್ಹ ವಿಷಯವಾಗಿದೆ.
 
ಹಾಗೆಯೇ, ವಿರೂಪಾಕ್ಷಪುರ ಗಡ್ಡೆ ದ್ವೀಪದಲ್ಲಿನ ಜನರನ್ನು ತೆರವುಗೊಳಿಸಿ ಅವರಿಗೆ ಬೇರೆ ಕಡೆ ಇರಲು ಸ್ಥಳಾವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುತ್ತಿರುವ  ವಿಷಯ ತಿಳಿದು ಹರ್ಷವಾಯಿತು. ಆ ಕೆಲಸ ಬೇಗ ಕೈಗೂಡಲಿ.

1) ಕೇವಲ ಹೂವು, ಹಣ್ಣು, ತೆಂಗಿನಕಾಯಿ ಇತ್ಯಾದಿ ಪೂಜಾ ಸಾಮಗ್ರಿಗಳಿಗೆ ಅವಕಾಶ ಮಾಡಿಕೊಡಬೇಕು. 2) ಕಲಾಕೃತಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬಹುದು ....

(ಎಂದರೆ ಈಚಿನ ಕಲಾಕೃತಿಗಳು). ಕುಶಲಕಲೆ ವಸ್ತುಗಳಿಗೆ ಅವಕಾಶವಿರಬೇಕು. 3) ಹಂಪಿಯಲ್ಲಿನ ಜನವಿಹೀನ ಪ್ರದೇಶದ, ಅಲಕ್ಷಿತ ಶಿಲ್ಪ, ಶಾಸನಗಳನ್ನು ಆ ಮಂಟಪಗಳಲ್ಲಿ ಪ್ರದರ್ಶನಕ್ಕಿಡಬಹುದು. 4) ಪುಸ್ತಕದ ಅಂಗಡಿಗಳಿಗೂ ಅವಕಾಶ ನೀಡಬೇಕು ಇತ್ಯಾದಿ.

ಆ ಮಂಟಪಗಳಲ್ಲಿ ಯಾವ ಕಾರಣಕ್ಕೂ ಬೀಡಿ, ಸಿಗರೇಟು, ಮದ್ಯ ಇತ್ಯಾದಿ ಕೆಟ್ಟ ಚಟಗಳ ವಸ್ತುಗಳಿಗೆ ಅವಕಾಶವಿರಬಾರದು. ಬೇಕಾದರೆ ಒಂದೆರಡು ಮಂಟಪಗಳಲ್ಲಿ ಕಾಫಿ, ತಿಂಡಿ, ಲಘು ಉಪಹಾರಗಳಿಗೆ ಅವಕಾಶ ನೀಡಬಹುದು. ಮಾಂಸಾಹಾರ ನಿಷಿದ್ಧವಾಗಬೇಕು. ಐಷಾರಾಮಿ ಹೋಟೆಲುಗಳಿಗೆ ಅಲ್ಲಿ ಅವಕಾಶವಿರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT