ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮೆಯ ಪ್ರಜೆ

Last Updated 21 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ಶೌರ್ಯ ಮೆರೆದ ಸುದ್ದಿ ಅಲ್ಲಗಳೆದ ವಿದ್ಯಾರ್ಥಿನಿ’ (ಪ್ರ.ವಾ., ಆ. 21) ಸುದ್ದಿ ಓದಿ ನಿಜಕ್ಕೂ ಹೆಮ್ಮೆ ಎನಿಸಿತು. ಭಾರತದ ಭಾವೀ ಪ್ರಜೆ ಹೇಗಿರಬೇಕು ಎಂಬುದಕ್ಕೆ ಈಕೆ ಮಾದರಿಯಾಗಿದ್ದಾಳೆ. ಪ್ರಶಸ್ತಿಗಳಿಗಾಗಿ ಅರ್ಜಿ ಗುಜರಾಯಿಸಿಕೊಂಡು, ಅದನ್ನು ಗಿಟ್ಟಿಸಿಕೊಳ್ಳಲು ಲಾಬಿ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹೇಗೋ ಮಾಡಿ ಪ್ರಶಸ್ತಿ ಪಡೆದು ಮೆರೆಯುವ ಜನರೇ ಈಗ ಹೆಚ್ಚಾಗಿದ್ದಾರೆ. ಅಂತಹುದರಲ್ಲಿ, ಅಧಿಕಾರಿಗಳು ಮನೆ ಬಾಗಿಲಿಗೇ ಬಂದು ಶಿಫಾರಸು ಮಾಡಲು ಮುಂದಾದಾಗ ವಸ್ತುಸ್ಥಿತಿಯನ್ನು  ವಿವರಿಸಿ ಪ್ರಶಸ್ತಿ ನಿರಾಕರಿಸಿದ ಆಕೆಯ ಸತ್ಯಸಂಧತೆಯನ್ನು ಎಷ್ಟು ಕೊಂಡಾಡಿದರೂ ಸಾಲದು.

ಆಕೆಯೇ ವಿನಂತಿಸಿರುವಂತೆ, ಮುಖ್ಯಮಂತ್ರಿ ಅವಳ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಲು ಸಹಾಯ ಮಾಡಿದರೆ ಅದೇ ಅವರು ಕೊಡುವ ನಿಜವಾದ ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT