ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಮಕ್ಕಳ ದುರ್ಬಳಕೆ ನಿಲ್ಲಲಿ

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಮಕ್ಕಳ ಕಳ್ಳಸಾಗಣೆ ಮತ್ತು ಅವರನ್ನು ಅಪಹರಿಸಿ ದುಷ್ಕೃತ್ಯಕ್ಕೆ ಇಳಿಸುವ ದಂಧೆ ಅವ್ಯಾಹತವಾಗಿ ನಡೆದಿದೆ. ಇದೊಂದು ಅಮಾನವೀಯ ಹಾಗೂ ಅಮಾನುಷ ಕೃತ್ಯ. ಇಂಥ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಮನೆಗೆಲಸಕ್ಕೆ ಮತ್ತು ಬೇಡುವ ವೃತ್ತಿಗೂ ತಳ್ಳಲಾಗುತ್ತದೆ. ಕೆಲವೊಮ್ಮೆ ಅಂಗವಿಕಲರನ್ನಾಗಿ ಮಾಡಲಾಗುತ್ತದೆ.

ಇಂತಹ ಪಿಡುಗನ್ನು ನಿವಾರಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಬೇಡುವ ಮಕ್ಕಳ ಡಿ.ಎನ್‌.ಎ. ಪರೀಕ್ಷೆ ಮಾಡಿಸಿ, ಆ ಮೂಲಕ ಮಕ್ಕಳ ಅಸಲಿ ಪೋಷಕರ ಪತ್ತೆಗೆ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ₹4 ಕೋಟಿ ಖರ್ಚು ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ ಈ ಉಪಯುಕ್ತ ಯೋಜನೆಯನ್ನು ಇತರ ರಾಜ್ಯಗಳೂ ಅನುಸರಿಸಿ ಮಕ್ಕಳ ಅಪಹರಣದಂತಹ ಕ್ರೂರ ಕೃತ್ಯವನ್ನು ತಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT